ಅಜ್ಜಿಯ ಜೊತೆ ರಜೆ ಕಳೆಯಲು ರಾಹುಲ್ ಬಯಕೆ, ಮತ್ತೆ ವಿದೇಶ ಪ್ರವಾಸ

ರಾಜಕಾರಣದಿಂದ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದು ತಮ್ಮ ಅಜ್ಜಿಯ ಜೊತೆ ಕಾಲ ಕಳೆಯಲು ಬಯಸಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. “ನಮ್ಮ ಅಜ್ಜಿ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಲು ಹೊರಟಿದ್ದು, ಅವರ ಜೊತೆ ಸ್ವಲ್ಪ ದಿನ ಕಳೆಯಲು ಬಯಸಿದ್ದೇನೆ” ಎಂದು ರಾಹುಲ್ ಗಾಂಧಿ ಟ್ವಿಟರ್ ಮೂಲಕ ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಅಜ್ಜಿ ಪವೋಲಾ ಮೈನೋ ಇಟಲಿಯಲ್ಲಿ ವಾಸವಿದ್ದಾರೆ. ಅವರನ್ನು ಭೇಟಿ ಮಾಡಲು ಹೊರಡುತ್ತಿರುವ ರಾಹುಲ್ ಗಾಂಧಿ, ಅಲ್ಲಿ ಎಷ್ಟು ದಿನಗಳು ಇರುತ್ತಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಮಾರ್ಚ್ ನಲ್ಲಿ ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ತೆರಳಿದ್ದಾಗ, ರಾಹುಲ್ ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮುನ್ನಾ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಲಂಡನ್ ಗೆ ಹಾರಿದ್ದರು. ಇದೀಗ ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ರಾಹುಲ್ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ.