ಯೋಗಿ ರಾಜ್ಯದಲ್ಲಿ ಹೋಟೆಲ್‌ಗಳ ಮೇಲೆ ಮೊದಲ ರೇಡ್, 50 ಜೋಡಿ ಬಂಧನ – News Mirchi

ಯೋಗಿ ರಾಜ್ಯದಲ್ಲಿ ಹೋಟೆಲ್‌ಗಳ ಮೇಲೆ ಮೊದಲ ರೇಡ್, 50 ಜೋಡಿ ಬಂಧನ

ಘಾಜಿಯಾಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬರುತ್ತಿದ್ದಂತೆಯೇ ಪೊಲೀಸರು ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಲಾಡ್ಜ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಘಾಜಿಯಾಬಾದಿನಲ್ಲಿರುವ ಬಾಜಾರಿಯಾ ಪ್ರದೇಶದಲ್ಲಿ ಎರಡು ಹೋಟೆಲ್ ಗಳ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು, 50 ಜೋಡಿಗಳನ್ನು ಬಂಧಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಸುತ್ತಿರುವ ಆರೋಪಗಳಿಂದಾಗಿ ಅವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು. ಯುವಕ ಯುವತಿಯರ ಪೋಷಕರನ್ನು ಕರೆಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಘಟನೆಯ ನಂತರ ಈ ಎರಡೂ ಹೋಟೆಲ್ ಗಳನ್ನು ಮುಚ್ಚಲಾಗಿದೆ.

ಹೋಟೆಲ್ ಮಾಲೀಕರು ದೆಹಲಿ-ಎನ್‌ಸಿಆರ್ ಮಾರ್ಗದಲ್ಲಿ ಗ್ರಾಹಕರಿಗೆ ಬಲೆ ಬೀಸಿ ಗಂಟೆಗಳ ಲೆಕ್ಕದಲ್ಲಿ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿದ್ದರು ಎಂಬ ಆರೋಪಗಳಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅನೈತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವ ಹೋಟೆಲ್ ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು ಮಹತ್ವ ಪಡೆದಿದೆ.

Loading...

Leave a Reply

Your email address will not be published.