ಐಟಿ ದಾಳಿ ಬಿಜೆಪಿ ಸಂಚು: ಎಐಎಡಿಎಂಕೆ ಆರೋಪ – News Mirchi

ಐಟಿ ದಾಳಿ ಬಿಜೆಪಿ ಸಂಚು: ಎಐಎಡಿಎಂಕೆ ಆರೋಪ

ಚೆನ್ನೈ: ಕೇಂದ್ರದಲ್ಲಿನ ಬಿಜೆಪಿ ಸರ್ಕಾರವೇ ಉದ್ದೇಶಪೂರ್ವಕವಾಗಿ ಐಟಿ ದಾಳಿಗಳನ್ನು ನಡೆಸುವ ಮೂಲಕ ತಮ್ಮನ್ನು, ತಮ್ಮ ಪಕ್ಷದ ಆಪ್ತರನ್ನು ಆತಂಕಗೊಳಿಸುತ್ತಿದೆ ಎಂದು ಅಣ್ಣಾಡಿಎಂಕೆ ಆರೋಪಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಧೀರನ್, ಇದು ಕೇಂದ್ರ ಸರ್ಕಾರದ ಸಂಚು ಎಂದು ಆರೋಪಿಸಿದ್ದಾರೆ.

ಬಿಜೆಪಿ ಉದ್ದೇಶಪೂರ್ವಕವಾಗಿ ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಅನ್ನು ನಮ್ಮ ಮೇಲೆ ಛೂ ಬಿಡುತ್ತಿದೆ. ಇದನ್ನು ಜನರು ಗಮನಿಸುತ್ತಿದ್ದಾರೆ. ಕೇಂದ್ರದ ಈ ಪ್ರಯತ್ನಗಳನ್ನು ನಾವು ಕಾನೂನು ಪ್ರಕಾರವೇ ಎದುರಿಸುತ್ತೇವೆ, ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದರು.

ಇನ್ನು ತಮಿಳುನಾಡಿನಲ್ಲಿನ ಮುಖಂಡರು ಮತ್ತು ಅಧಿಕಾರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಆದಾಯ ತೆರಿಗೆ ಇಲಾಖೆಗೆ ಬಂದ ಮಾಹಿತಿಯನ್ನು ಆಧರಿಸಿ ಅವರು ದಾಳಿ ನಡೆಸುತ್ತಾರೆ. ಇಂತಹವರ ಮೇಲೆ ದಾಳಿ ನಡೆಸಬೇಕು, ಇಂತಹವರ ಮೇಲೆ ದಾಳಿ ನಡೆಸಬಾರದು ಎಂಬ ನಿಯಮಗಳು ಆದಾಯ ತೆರಿಗೆ ಇಲಾಖೆಗೆ ಇಲ್ಲ ಎಂದು ಬಿಜೆಪಿ ನಾಯಕರಾದ ನಿರ್ಮಲಾ ಸೀತಾರಾಮನ್, ಪೊನ ರಾಧಾಕೃಷ್ಣನ್ ಹೇಳಿದ್ದಾರೆ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache