ಗಂಡನನ್ನು ಬಿಡುಗಡೆ ಮಾಡಲು ನನ್ನೊಂದಿಗೆ ಮಲಗು ಎಂದ ಪೊಲೀಸಪ್ಪ |News Mirchi

ಗಂಡನನ್ನು ಬಿಡುಗಡೆ ಮಾಡಲು ನನ್ನೊಂದಿಗೆ ಮಲಗು ಎಂದ ಪೊಲೀಸಪ್ಪ

ಜೋಧ್ ಪುರ: ಮಾದಕ ಪದಾರ್ಥ ಹೊಂದಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಪತಿಯನ್ನು ಬಿಡಿಸಿಕೊಳ್ಳಲು ನೆರವು ಕೇಳಿದ ಪತ್ನಿಗೆ ಪೊಲೀಸ್ ಅಧಿಕಾರಿಯೊಬ್ಬ ತನ್ನೊಂದಿಗೆ ಮಲಗುವ ಷರತ್ತು ವಿಧಿಸಿದ್ದ ಪ್ರಕರಣ ಜೋಧ್ ಪುರದಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಬಿಡಿಸಿಕೊಳ್ಳಲು ನೆರವಿಗಾಗಿ ಒದ್ದಾಡುತ್ತಿದ್ದ ಮಹಿಳೆಗೆ ಪೊಲೀಸ್ ಅಧಿಕಾರಿಯೊಬ್ಬರು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾನೆ. ಆದರೆ ಅದಕ್ಕಾಗಿ ಆತ 2 ಲಕ್ಷ ರೂಪಾಯಿ ಲಂಚ ಕೇಳಿದ್ದಾನೆ.

ಲಂಚ ನೀಡಲು ಒಪ್ಪಿಕೊಂಡ ಮಹಿಳೆ 1 ಲಕ್ಷ ರೂಪಾಯಿ ಹೊಂದಿಸಿ ಆತನಿಗೆ ನೀಡಿ, ಉಳಿದ 1 ಲಕ್ಷ ನಿಧಾನವಾಗಿ ನೀಡುವುದಾಗಿಯೂ, ಗ್ಯಾರೆಂಟಿಗಾಗಿ ಚೆಕ್ ನೀಡುವುದಾಗಿ ಹೇಳಿದ್ದಳು. ಅದಕ್ಕೆ ಒಪ್ಪಿಕೊಂಡಿದ್ದ ಆತ ಉಳಿದ ಒಂದು ಲಕ್ಷ ಕೊಡಲಾಗದಿದ್ದರೆ ನನ್ನೊಂದಿಗೆ ಮಲಗು ಎಂದು ಒತ್ತಾಯಿಸಿದ್ದ. ಹೀಗಾಗಿ ನೊಂದ ಮಹಿಳೆ ನೇರವಾಗಿ ಎಸಿಬಿ ಅಧಿಕಾರಿಗಳ ಮೊರೆ ಹೋದಳು. ಮಹಿಳೆಯ ಮನೆಗೆ ಪೊಲೀಸಪ್ಪ ಹೋದ ಕೂಡಲೇ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದು, ಚೆಕ್ ವಶಪಡಿಸಿಕೊಂಡಿದ್ದಾರೆ.

Loading...
loading...
error: Content is protected !!