ಮೀಸಲಾತಿ ಹೆಚ್ಚಳ, ರಾಜೇ ಸರ್ಕಾರಕ್ಕೆ ಹೈಕೋರ್ಟ್ ನಲ್ಲಿ ಮತ್ತೊಮ್ಮೆ ಹಿನ್ನಡೆ – News Mirchi

ಮೀಸಲಾತಿ ಹೆಚ್ಚಳ, ರಾಜೇ ಸರ್ಕಾರಕ್ಕೆ ಹೈಕೋರ್ಟ್ ನಲ್ಲಿ ಮತ್ತೊಮ್ಮೆ ಹಿನ್ನಡೆ

ಜೈಪುರ: ವಸುಂಧರಾ ರಾಜೆ ಸರ್ಕಾರಕ್ಕೆ ರಾಜಸ್ಥಾನ ಹೈಕೋರ್ಟ್ ನಿಂದ ಮತ್ತೊಮ್ಮೆ ಹಿನ್ನಡೆಯಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಮಸೂದೆಗೆ ತಡೆ ನೀಡಿ ಗುರುವಾರ ನ್ಯಾಯಾಲಯ ಆದೇಶ ಜಾರಿ ಮಾಡಿದೆ. ಮುಂಬರುವ ವರ್ಷದಲ್ಲಿ ಚುನಾವಣೆಯಿರುವ ಹಿನ್ನೆಲೆಯಲ್ಲಿ ನಾಲ್ಕು ಜಾತಿಗಳನ್ನು ಅದರಲ್ಲೂ ಗುಜ್ಜರ್ ಸಮುದಾಯವನ್ನು ಗುರಿಯಾಗಿಸಿಕೊಂಡು ಅಲ್ಲಿನ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಶೇ.5 ರಷ್ಟು ಹೆಚ್ಚಳ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿತ್ತು.

ಆದರೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಮೀಸಲಾತಿ ಕೋಟಾ ಶೇ.50 ಮೀರಬಾರದು. ಇದೀಗ ರಾಜ್ಯಸರ್ಕಾರದ ತೀರ್ಮಾನದಿಂದ ಅದು ಶೇ.54 ಕಕ್ಕೇರಿದೆ. ಹೀಗಾಗಿ ಮಸೂದೆಗೆ ತಡೆ ನೀಡುತ್ತಿರುವುದಾಗಿ ಹೈಕೋರ್ಟ್ ಹೇಳಿದೆ.

ರಾಜೆ ಸರ್ಕಾರಕ್ಕೆ ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದು ಇದೇ ಮೊದಲಲ್ಲ. 2015 ರಲ್ಲಿಯೂ ಹಿಂದುಳಿದ ಜಾತಿಗಳ ವಿಶೇಷ ಕಾಯ್ದೆ 2015 ಮೂಲಕ ಅವರ ಮೀಸಲಾತಿ ಪ್ರಮಾಣವನ್ನು ಶೇ.21 ರಿಂದ ಶೇ.26ಕ್ಕೆ ಏರಿಸಲು ರಾಜಸ್ಥಾನ ಸರ್ಕಾರ ಯತ್ನಿಸಿತ್ತು. ಆದರೆ ನ್ಯಾಯಾಲಯ ಆ ಕಾಯ್ದೆಯನ್ನು ರದ್ದುಪಡಿಸಿ ತೀರ್ಪು ನೀಡಿತ್ತು. ಹೀಗಾಗಿ ಇದೇ ವರ್ಷ ಮೇ19 ರಂದು ಮತ್ತೊಮ್ಮೆ ವಿಶೇಷ ವರ್ಗಕ್ಕೆ ಅವರನ್ನ ಸೇರಿಸಿ ಒಬಿಸಿ ಪಟ್ಟಿಯನ್ನು ತಯಾರಿಸಿತ್ತು ರಾಜಸ್ಥಾನ ಸರ್ಕಾರ. ಾದರೆ ಆ ಸಂದರ್ಭದಲ್ಲಿ ಗುಜ್ಜರ್ ಸಮುದಾಯದ ನಾಯಕರು ಹೊಸ ಕಾಯ್ದೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಚರ್ಚೆಯಲ್ಲಿ ತಮಗೆ ನೀಡಿದ ಭರವಸೆಯಂತೆ ಸರ್ಕಾರ ನಡೆಯುತ್ತಿಲ್ಲ ಎಂದು ಪ್ರತಿಭಟನೆ ಹಾದಿ ಹಿಡಿದಿದ್ದರು. ಹೀಗಾಗಿ ಚರ್ಚೆಗಳ ಮೂಲಕವೇ ಅವರನ್ನು ಸಮಾಧಾನಗೊಳಿಸಿದ ಮುಖ್ಯಮಂತ್ರಿ ವಸುಂಧರಾ ರಾಜೇ ಮಸೂದೆಯನ್ನು ಅಂಗೀಕಾರವಾಗುವಂತೆ ನೋಡಿಕೊಂಡರು.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!