ಬಲವಂತದ ಮತಾಂತರಗಳನ್ನು ಪರಿಶೀಲಿಸಲು ರಾಜಸ್ಥಾನ ಹೈಕೋರ್ಟ್ ನ ಮಾರ್ಗಸೂಚಿಗಳು |News Mirchi

ಬಲವಂತದ ಮತಾಂತರಗಳನ್ನು ಪರಿಶೀಲಿಸಲು ರಾಜಸ್ಥಾನ ಹೈಕೋರ್ಟ್ ನ ಮಾರ್ಗಸೂಚಿಗಳು

ರಾಜಸ್ಥಾನದಲ್ಲಿ ಬಲವಂತದ ಮತಾಂತರಗಳ ಬಗ್ಗೆ ಪರಿಶೀಲಿಸಲು ರಾಜಸ್ಥಾನ ಹೈಕೋರ್ಟ್ ಶುಕ್ರವಾರ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ರಾಜಸ್ಥಾನದಲ್ಲಿ ಮತಾಂತರವಾಗಲು ಬಯಸುವ ಯಾವುದೇ ವ್ಯಕ್ತಿಯಾಗಲಿ ಮೊದಲು ಜಿಲ್ಲಾಧಿಕಾರಿ ಅಥವಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಥವಾ ನಗರದ ಉಪ ವಿಭಾಗೀಯ ಕಛೇರಿಗೆ ಮಾಹಿತಿ ನಿಡಬೇಕು. ನಂತರ ಈ ವಿವರಗಳನ್ನು ನೋಟೀಸ್ ಬೋರ್ಡ್ ಗಳಲ್ಲಿ ಹಾಕಲಾಗುತ್ತದೆ. ಮತಾಂತರವಾದ ಒಂದು ವಾರದ ನಂತರವಷ್ಟೇ ಮದುವೆಯಾಗಲು ಅವಕಾಶ ಎಂದು ಕೋರ್ಟ್ ಹೇಳಿದೆ.

ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮದುವೆಯಾದ ಸಂದರ್ಭದಲ್ಲಿ, ಇದಕ್ಕೆ ಸಂಬಂಧಿಸಿದಂತೆ ದೂರು ಬಂದಲ್ಲಿ ಅಂತಹ ವಿವಾಹವು ಅನೂರ್ಜಿತವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಧಾರ್ಮಿಕತೆಯು ನಂಬಿಕೆಯ ಮೇಲೆ ವಿಷಯವಗಿದೆಯೇ ಹೊರತು ತರ್ಕಕ್ಕೆ ಸಂಬಂಧಿಸಿದ್ದಲ್ಲ, ಹೀಗಾಗಿ ಬಲವಂತ ಮತಾಂತರವನ್ನು ಪರಿಶೀಲಿಸಲು ಕೆಲವ ಮಾರ್ಗಸೂಚಿಗಳು ಅತ್ಯಗತ್ಯ ಎಂದು ನ್ಯಾಯಾಲಯ ನ್ಯಾ. ಗೋಪಾಲ ವ್ಯಾಸ್ ಮತ್ತು ವೀರೇಂದ್ರ ಕುಮಾರ್ ಮಾಥುರ್ ಅವರ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೊಸ ಮಾರ್ಗಸೂಚಿಗಳು ಬಲವಂತದ ಮತಾಂತರ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಅಧಿಕಾರ ನೀಡುತ್ತವೆ.  ರಾಷ್ಟ್ರಪತಿಗಳ ಅಂಕಿತಕ್ಕೆ ಕಾಯುತ್ತಿರುವ ‘ರಾಜಸ್ಥಾನ ಧಾರ್ಮಿಕ ಸ್ವಾತಂತ್ರ್ಯ ಮಸೂದೆ ಕಾಯ್ದೆ 2006’ ಜಾರಿಯಾಗುವವರೆಗೂ ಈ ಮಾರ್ಗಸೂಚಿಗಳು ಚಾಲ್ತಿಯಲ್ಲಿರುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಪ್ರತಿಯೊಬ್ಬ ನಾಗರಿಕ ಭಾರತದ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಆದರೆ ಇತರೆ ಧರ್ಮದ ಭಾವನೆಗಳನ್ನು ಗೌರವಿಸಿ ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸಂವಿಧಾನದ ನಿಬಂಧನೆಗಳ ವಿರುದ್ಧವಾಗಿ ವರ್ತಿಸಬಾರದು ಎಂದು ನ್ಯಾಯಪೀಠ ಹೇಳಿದೆ. ಬಲವಂತವಾಗಿ ತಮ್ಮ ಮಗಳನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದು ಹಿಂದೂ ಕುಟುಂಬವವೊಂದು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಾರ್ಗಸೂಚಿಗಳನ್ನು ನೀಡಿದೆ.

 

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!