ದನಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರ ಬಂಧನ – News Mirchi

ದನಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರ ಬಂಧನ

ದನಗಳ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಂಗಳವಾರ ರಾಜಸ್ಥಾನದ ಆಳ್ವಾರ್ ನಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ಉಮ್ಮನರ್ ಖಾನ್ ನ ದೇಹವನ್ನು ಅಪಘಾತದಲ್ಲಿ ಸತ್ತಂತೆ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ರಾಮ್ ವೀರ್ ಗುಜ್ಜರ್ ಮತ್ತು ಭಗವಾನ್ ಸಿಂಗ್ ಎಂಬುವವರು ತಾವು ಗೋರಕ್ಷಕರು ಮತ್ತು ಹತ್ಯೆಯನ್ನು ತಾವೇ ಮಾಡಿರುವುದಾಗಿ ಅಂಗೀಕರಿಸಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ನವೆಂಬರ್ 10 ರಂದು ಖಾನ್ ಮತ್ತು ತಾಹಿರ್ ಎಂಬ ವ್ಯಕ್ತಿಗಳು ದನಗಳನ್ನು ಆಳ್ವಾರ್ ನಿಂದ ಭರತ್ ಪುರಕ್ಕೆ ಸಾಗಿಸುತ್ತಿದ್ದರು. ಈ ವೇಳೆ ಅವರ ಮೇಲೆ ದಾಳಿಯಾಗಿದ್ದು, ಖಾನ್ ನ ಛಿದ್ರಗೊಂಡ ದೇಹವು ರೈಲು ಹಳಿಯ ಮೇಲೆ ಅಂದು ಸಂಜೆ ಪತ್ತೆಯಾಗಿತ್ತು.

ತಮ್ಮ ಹಳ್ಳಿಯ ಮೂಲಕ ಖಾಲಿ ಟ್ರಕ್ ಹಾದು ಹೋಗಿದ್ದು, ಅದು ದನಗಳನ್ನು ತುಂಬಿಕೊಂಡು ವಾಪಸಾಗಲಿದೆ ಎಂದು ದಾಳಿ ನಡೆಸಿದವರು ಅಂದಾಜಿಸಿದ್ದು. ಹಾಗೆ ವಾಪಸ್ ಬಂದಿದ್ದೇ ಆದಲ್ಲಿ ಅದನ್ನು ತಡೆಯಲು ಅವರು ಯೋಜಿಸಿದ್ದರು. ಹಾಗೆ ದನಗಳನ್ನು ತುಂಬಿಕೊಂಡ ಟ್ರಕ್ ವಾಪಸ್ ಬರುವ ಹಾದಿಯಲ್ಲಿ ಮೊಳೆಗಳನ್ನು ಹಾಕಿದ್ದರು ಎಂದು ಪೊಲೀಸ್ ಅಧಿಕಾರಿ ಮೋಲ್ ಸಿಂಗ್ ರಾಣಾ ಹೇಳಿದ್ದಾರೆ.

ದನಗಳನ್ನು ಸಾಗಿಸುತ್ತಿದ್ದ ಖಾನ್ ಮತ್ತು ತಾಹಿರ್ ಇಬ್ಬರೂ ದನಗಳ ಕಳ್ಳಸಾಗಾಣಿಕೆದಾರರು ಎಂದು ಪೊಲೀಸರೂ ಕೂಡಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರು ಸಾಗಿಸುತ್ತಿದ್ದ ಟ್ರಕ್ ಕೂಡಾ ಉತ್ತರಪ್ರದೇಶದಿಂದ ಕದ್ದು ತರಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!