ನೋಟು ರದ್ದು: ಜನರಿಗೆ ಏನು ಉತ್ತರ ಕೊಡುತ್ತೀರಿ? ಯೆಚೂರಿ ಪ್ರಶ್ನೆ

ನವದೆಹಲಿ: ಹಳೆಯ 500, 1000 ಮುಖ ಬೆಲೆಯ ವಿಷಯದ ಕುರಿತು ಇಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಿತು. ರಾಜ್ಯಸಭೆ ಆರಂಭವಾಗುತ್ತಿದ್ದಂತೆ ಕುರಿತಂತೆ ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಹೀಗಾಗಿ ಉಪ ಸ್ಪೀಕರ್ ಕುರಿಯನ್ ಚರ್ಚೆಗೆ ಅನುಮತಿ ನೀಡಿದರು. ಸದಸ್ಯ ಆನಂದ ಶರ್ಮ ಚರ್ಚೆ ಆರಂಭಿಸಿದರು.

ನೋಟು ರದ್ದುಗೊಳಿಸುವುದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅಂದಾಜು ಮಾಡುವಲ್ಲಿ ಸೋತಿದೆ ಎಂದು ಆನಂದ್ ಶರ್ಮ ಹೇಳಿದರು. ದೇಶದಲ್ಲಿ ಕಪ್ಪು ಹಣ ಎಷ್ಟಿದೆ ಎಂಬುದನ್ನು ಹಣಕಾಸು ಸಚಿವರು ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಹೊಸ 2000 ಮುಖಬೆಲೆಯ ನೋಟಿಗೆ ಚಿಲ್ಲರೆ ಸಿಗುತ್ತಿಲ್ಲ, ಪೂರ್ವ ಮಾಹಿತಿ ನೀಡದೆ ಏಕಾ ಏಕಿ ರದ್ದುಗೊಳಿಸಿದ್ದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ನೋಟು ರದ್ದುಗೊಳಿಸಿದ್ದರು, ಆದರೆ ಆಗ ಸ್ವಲ್ಪ ಸಮಯ ನೀಡಿದ್ದರಿಂದ ಜನರಿಗೆ ತೊಂದರೆಯಾಗಲಿಲ್ಲ ಎಂದು ಹೇಳಿದರು. ದೇಶದಲ್ಲಿರುವ ವಿದೇಶೀಯರೂ ಕೂಡಾ ಕೈಯಲ್ಲಿ ಲಕ್ಷಾಂತರ ರೂ ಹಣವಿದ್ದರೂ ಹೋಟೆಲ್ ಬಿಲ್ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದಾರೆ ಎಂದರು.

ವಿಷಯ ತುಂಬಾ ಸೂಕ್ಷ್ಮ ವಿಷಯ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದರು. ಈ ನಿರ್ಧಾರದಿಂದ ಮಧ್ಯಮವರ್ಗದ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಎಲ್ಲಾ ವ್ಯವಹಾರ ಆನ್ಲೈನ್ ನಲ್ಲಿ ಮಾಡಿ ಎಂದರೆ ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಂದು ನ ಸೀತಾರಾಮ ಯೆಚೂರಿ ಪ್ರಶ್ನಿಸಿದರು. ಸ್ವೀಡನ್ ನಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆ ಇದೆ. ಅಲ್ಲಿನ ಜನ ಶೇ.100 ರಷ್ಟು ಇಂಟರ್ನೆಟ್ ಬಳಸುತ್ತಾರೆ, ಆದರೆ ಭಾರತದ ವಿಷಯಕ್ಕೆ ಬಂದಾಗ ಎಷ್ಟು ಜನ ಇಂಟರ್ನೆಟ್ ಬಳಸುತ್ತಾರೆ ಎಂದು ಪ್ರಶ್ನಿಸಿದರು. ಪ್ಲಾಸ್ಟಿಕ್ ನಗದು ವ್ಯವಹಾರದಿಂದಾಗಿ ದೇಶದ ಜನರಿಗೆ ಏನೂ ಪ್ರಯೋಜನವಿಲ್ಲ ಎಂದರು. ಸರ್ಕಾರದ ದಿಢೀರ್ ನಿರ್ಧಾರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವಿರಾರು ಸರಕು ಸಾರಿಗೆ ವಾಹನಗಳು ನಿಂತುಹೋಗಿವೆ. ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಾಲ ಮಾತ್ರ ಮನ್ನಾ ಆಗುತ್ತಿಲ್ಲ, ಸಂತ್ರಸ್ತ ರೈತ ಕುಟುಂಬಗಳ ನೆರವಿಗೆ ಸರ್ಕಾರ ಮುಂದಾಗಬೇಕು. ಸಮಸ್ಯೆ ಎದುರಿಸುತ್ತಿರುವ ಜನರಿಗೆ ಏನು ಉತ್ತರ ನೀಡುತ್ತೀರಿ ಎಂದು ಯೆಚೂರಿ ಪ್ರಶ್ನಿಸಿದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache