ಗೌತಮೀಪುತ್ರ ಶಾತಕರ್ಣಿ ಆಡಿಯೋ ಬಿಡುಗಡೆ: ಬಾಲಯ್ಯ ಅಭಿಮಾನಿಗಳ ಬೃಹತ್ ರ‌್ಯಾಲಿ – News Mirchi

ಗೌತಮೀಪುತ್ರ ಶಾತಕರ್ಣಿ ಆಡಿಯೋ ಬಿಡುಗಡೆ: ಬಾಲಯ್ಯ ಅಭಿಮಾನಿಗಳ ಬೃಹತ್ ರ‌್ಯಾಲಿ

ತಿರುಪತಿ: ಟಾಲಿವುಡ್ ಟಾಪ್ ಹೀರೋ, ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ ಅಭಿನಯದ, ಭಾರಿ ಬಡ್ಜೆಟ್ ನೊಂದಿಗೆ ತಯಾರಾಗಿರುವ ಐತಿಹಾಸಿಕ ಚಿತ್ರ ‘ಗೌತಮಿಪುತ್ರ ಶಾತಕರ್ಣಿ’ ಆಡಿಯೋ ಬಿಡುಗಡೆಯ ಹಿನ್ನೆಲೆಯಲ್ಲಿ ಎಂದೂ ಕಂಡರಿಯದ ರೀತಿ ಬಾಲಕೃಷ್ಣ ಅಭಿಮಾನಿಗಳು ತಿರುಪತಿಯಲ್ಲಿ ಸೋಮವಾರ ರ‌್ಯಾಲಿಯನ್ನು ಹಮ್ಮಿಕೊಂಡಿದ್ದಾರೆ.

ಆಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ನಡೆಯಲಿರುವ ರ‌್ಯಾಲಿ ವಿಜಯೋತ್ಸವ ರ‌್ಯಾಲಿಯಂತೆಯೇ ಇರಲಿದೆ ಎನ್ನಲಾಗುತ್ತಿದೆ. ತಿರುಪತಿಯ ನೆಹರೂ ಮುನ್ಸಿಪಲ್ ಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮದ ಸಿದ್ದತೆಗಳೆಲ್ಲವೂ ಈಗಾಗಲೇ ಪೂರ್ಣಗೊಂಡಿವೆ.

ಮಹತ್ವಾಕಾಂಕ್ಷೆಯ ಈ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮಕ್ಕೆ ಟಿಡಿಪಿ ಮುಖಂಡ, ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ರಾಜಕೀಯ ಮುಖಂಡರು, ಸಿನಿ ಪ್ರಮುಖರು ಹಾಜರಾಗಲಿದ್ದಾರೆ.

ನಾಳೆ ಮದ್ಯಾಹ್ಞ ತಿರುಪತಿ ತಲುಪಲಿರುವ ಬಾಲಕೃಷ್ಣ, ಸಂಜೆ ಕಾರ್ಯಕ್ರಮ ನಡೆಐವ ಸ್ಥಳಕ್ಕೆ ಆಗಮಿಸಲಿದ್ದಾರೆ. ಈ ವೇಳೆಯೇ ಬೃಹತ್ ರ‌್ಯಾಲಿ ಸಾಗಲಿದೆ.

Loading...

Leave a Reply

Your email address will not be published.