ದೇಶದಲ್ಲಿ ಅತ್ಯಂತ ಅಸಂತೃಪ್ತ ವ್ಯಕ್ತಿ ನಾನೇ, ಮೋದಿ ನಿರಾಸೆಗೊಳಿಸಿದ್ದಾರೆ

2014 ರ ಲೋಕಸಭಾ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ನಿರ್ವಹಣೆ ತನ್ನನ್ನು ನಿರಾಸೆಗಳಿಸಿದೆ ಎಂದು ಪ್ರಸಿದ್ಧ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.

2011 ರವರೆಗೂ ಪ್ರಧಾನಿಯವರಿಗಾಗಿ ಕೆಲಸ ಮಾಡಿದ್ದ ನಾನು, ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಾಗ ಸಂಡೇ ಗಾರ್ಡಿಯನ್ ಪತ್ರಿಕೆ ಲೇಖನವೊಂದನ್ನು ಬರೆದು ಅದರಲ್ಲಿ ಮೋದಿಯವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಅವರ ಗೆಲುವಿನಲ್ಲಿ ನನ್ನ ಸಣ್ಣ ಕೊಡುಗೆ ಇರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ತಿಳಿಸಿದ್ದೆ. ಅಷ್ಟೇ ಅಲ್ಲದೆ ದೇಶದ ಜನತೆಗೆ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ನೆರವೇರಿಸುವಂತೆ ಮನವಿ ಮಾಡಿದ್ದೆ. ಆದರೆ ಇಂದು ನಾನು ದೇಶದಲ್ಲಿ ಅತ್ಯಂತ ಅಸಂತೃಪ್ತ ವ್ಯಕ್ತಿ ಎಂದು ಹೇಳಲು ಬಯಸುತ್ತೇನೆ. ಭಾರತದ ಜನತೆಗೆ ನೀಡಿದ್ದ ಒಂದೇ ಒಂದು ಭರವಸೆಯನ್ನೂ ಮೋದಿ ಸರ್ಕಾರ ನೆರವೇರಿಸಿಲ್ಲ. ಹಾಗಾಗಿ ನಾನು ತುಂಬಾ ನಿರಾಸೆಗೊಂಡಿದ್ದೇನೆ ಎಂದು ಜೇಠ್ಮಲಾನಿ ಹೇಳಿದ್ದಾರೆ