ಅರುಣ್ ಜೇಟ್ಲಿಯವರನ್ನು ನಿಂದಿಸುವಂತೆ ಸೂಚಿಸಿದ್ದೇ ಕೇಜ್ರಿವಾಲ್: ಜೇಠ್ಮಲಾನಿ |News Mirchi

ಅರುಣ್ ಜೇಟ್ಲಿಯವರನ್ನು ನಿಂದಿಸುವಂತೆ ಸೂಚಿಸಿದ್ದೇ ಕೇಜ್ರಿವಾಲ್: ಜೇಠ್ಮಲಾನಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿ ಅವರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಲು ಆಮ್ ಆದ್ಮಿ ಪಕ್ಷ ಪಕ್ಷದ ಮುಖಂಡ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ತಮಗೆ ಸೂಚಿಸಿದ್ದರು ಎಂದು ಪ್ರಸಿದ್ಧ ವಕೀಲ ರಾಮ್ ಜೇಠ್ಮಲಾನಿ ಆರೋಪಿಸಿದ್ದಾರೆ. ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕೇಜ್ರಿವಾಲ್ ಪರ ಜೇಠ್ಮಲಾನಿ ಅವರೇ ವಾದಿಸಿದ್ದು ನಮಗೆ ತಿಳಿದದ್ದೇ. ವಿಚಾರಣೆ ವೇಳೆ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರುಣ್ ಜೇಟ್ಲಿ ಅವರು ಮತ್ತೆ ಹತ್ತು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ಕೇಜ್ರಿವಾಲ್ ವಿರುದ್ಧ ಹೂಡಿದ್ದರು.

ತಮ್ಮ ವಕೀಲರ ಸೂಚನೆಯಂತೆಯೇ ತಾವು ನಿಂದನಾರ್ಹ ಪದಬಳಕೆ ಮಾಡಿದ್ದಾಗಿ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯದಲ್ಲಿ ಹೇಳಿದ್ದರಿಂದ ಜೇಠ್ಮಲಾನಿ ತುಂಬ ಬೇಸರಗೊಂಡಿದ್ದರು. ನನಗೆ ಕೇಜ್ರಿವಾಲ್ ಅವರೇ ಜೇಟ್ಲಿಯವರನ್ನು ನಿಂದಿಸುವಂತೆ ಸೂಚಿಸಿದ್ದರು. ವಾಸ್ತವವಾಗಿ ನಮ್ಮಿಬ್ಬರ ಸಂಭಾಷಣೆಯಲ್ಲಿ ಇನ್ನೂ ಕೆಟ್ಟ ಪದಗಳಲ್ಲಿ ಜೇಟ್ಲಿ ಅವರ ಕುರಿತು ನಿಂದಿಸಿದ್ದರು ಎಂದು ಬಹಿರಂಗಪಡಿಸದ್ದಾರೆ ಜೇಠ್ಮಲಾನಿ.  ಇದೀಗ ಕೇಜ್ರಿವಾಲ್ ವಿರುದ್ಧ ತಿರುಗಿ ಬಿದ್ದಿರುವ ಜೇಠ್ಮಲಾನಿ, ಇನ್ನು ಮುಂದೆ ಕೇಜ್ರಿವಾಲ್ ಪ್ರಕರಣಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದು, ಕೇಜ್ರಿವಾಲ್ ಪರ ವಕಾಲತ್ತು ವಹಿಸಿದ್ದಕ್ಕಾಗಿ ತಮಗೆ ಬರಬೇಕಿದ್ದ ಬಾಕಿ ಎಲ್ಲವನ್ನೂ ಪಾವತಿಸುವಂತೆ ಕೇಜ್ರಿವಾಲ್ ಅವರನ್ನು ಒತ್ತಾಯಿಸಿದ್ದಾರೆ

Loading...
loading...
error: Content is protected !!