ರಾಮ್ ರಹೀಮ್ ಬೆಂಬಲಿಗರಿಂದ ಹಿಂಸಾಚಾರ: 13 ಸಾವು |News Mirchi

ರಾಮ್ ರಹೀಮ್ ಬೆಂಬಲಿಗರಿಂದ ಹಿಂಸಾಚಾರ: 13 ಸಾವು

ಚಂಡೀಘಡ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಸಿಬಿಐ ನ್ಯಾಯಾಲಯ ಅಪರಾಧಿ ಎಂದು ಘೋಷಿಸುತ್ತಿದ್ದಂತೆ ಪಂಜಾಬ್ ಮತ್ತು ಹರಿಯಾಣದಲ್ಲಿ ಗುರ್ಮೀತ್ ಬೆಂಬಲಿಗರು ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಹಿಂಸಾಚಾರದಲ್ಲಿ ಕನಿಷ್ಟ 13 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಉತ್ತರ ದೆಹಲಿಯ ಲೋನಿ ಚೌಕದಲ್ಲಿ ಡೇರಾ ಬೆಂಬಲಿಗರು ಬಸ್ಸೊಂದಕ್ಕೆ ಬೆಂಕಿ ಹಚ್ಚಿದ್ದು, ಬಾಬು ಜಗಜೀವನ ರಾಂ ಸ್ಮಾರಕ ಆಸ್ಪತ್ರೆ ಬಳಿಯೂ ಒಂದು ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹರಿಯಾಣದಲ್ಲಿ ಮೂರು ಮಾಧ್ಯಮಗಳ ವಾಹನಗಳು ಬೆಂಕಿಗಾಹುತಿಯಾಗಿವೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಬಳಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಪಂಜಾಬ್ ನಲ್ಲಿ ಮಾಲೌಟ್ ರೈಲ್ವೇ ನಿಲ್ದಾಣ, ಪೆಟ್ರೋಲ್ ಪಂಪ್ ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜನರು ಶಾಂತಿ, ಸಂಯಮ ಪಾಲಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮನವಿ ಮಾಡಿದ್ದು, ಹಿಂಸೆಗಿಳಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಉದ್ವಿಘ್ನ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಎರಡು ರಾಜ್ಯಗಳಲ್ಲಿ 201 ರೈಲು ಸೇವೆಗಳನ್ನು ರದ್ದು ಮಾಡಿದೆ.

ಗುರ್ಮೀತ್ ಸಿಂಗ್ ಅವರನ್ನು ದೋಷಿಯೆಂದು ತೀರ್ಮಾನಿಸಿ ಕೋರ್ಟ್ ತೀರ್ಪು ನೀಡಿದ್ದರಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೂರವಾಣಿಮೂಲಕ ಮಾತನಾಡಿದ್ದಾರೆ. [ಇದನ್ನೂ ಓದಿ: ಅತ್ಯಾಚಾರ ಪ್ರಕರಣ, ಗುರ್ಮೀತ್ ರಾಮ್ ರಹೀಮ್ ಅಪರಾಧಿ]

Loading...
loading...
error: Content is protected !!