ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಗುರ್ಮೀತ್ ದತ್ತು ಪುತ್ರಿ ಹನಿಪ್ರೀತ್ – News Mirchi

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಗುರ್ಮೀತ್ ದತ್ತು ಪುತ್ರಿ ಹನಿಪ್ರೀತ್

ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಳನ್ನು ಹರಿಯಾಣ ಪೊಲೀಸರು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 43 ಹೆಸರುಗಳಿವೆ. ಆಗಸ್ಟ್ 25 ರಂದು ಪಂಚಕುಲದಲ್ಲಿ ನಡೆದ ಗಲಭೆಗಳ ಪ್ರಮುಖ ಸೂತ್ರಧಾರಿ ಹನಿಪ್ರೀತ್ ಎಂದು ಪೊಲೀಸರು ಅನುಮಾನಿಸುತ್ತಿದ್ದಾರೆ.

ಗಲಭೆಯ ನಂತರ ಕಣ್ಮರೆಯಾಗಿರುವ ಆಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಡೇರಾ ವಕ್ತಾರ ಆದಿತ್ಯ ಇನ್ಸಾನ್ ನನ್ನೂ ಕೂಡಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಸೇರಿಸಲಾಗಿದೆ. ‘ವಾಂಟೆಡ್ -43’ ಪಟ್ಟಿಯಲ್ಲಿರುವ ಪ್ರಕಾಶ್ ಅಲಿಯಾಸ್ ವಿಕ್ಕಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದಿತ್ಯ ಇನ್ಸಾನ್ ಸಂಬಂಧಿಯಾದ ಪ್ರಕಾಶ್ ಈ ಪಟ್ಟಿಯಲ್ಲಿ ಮೂರನೇ ವ್ಯಕ್ತಿ.

[ಇದನ್ನೂ ಓದಿ: ಗುರ್ಮೀತ್ ನಿವಾಸದಿಂದ ಶಿಷ್ಯೆಯರ ಹಾಸ್ಟೆಲ್ ಗೆ ರಹಸ್ಯ ಸುರಂಗ ಮಾರ್ಗ!]

ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಗುರ್ಮೀತ್ ಗೆ ಸಿಬಿಐ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದು ನಮಗೆಲ್ಲಾ ತಿಳಿದದ್ದೇ. ಗುರ್ಮೀತ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದಾಗ ಗುರ್ಮೀತ್ ಬೆಂಬಲಿಗರು ಗಲಭೆಗಿಳಿದಿದ್ದರು. ಈ ಗಲಭೆಗಳಲ್ಲಿ ಸುಮಾರು 30 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಹನಿಪ್ರೀತ್ ಸೂಚನೆಯಂತೆಯೇ ಗಲಭೆಗಳು ನಡೆದಿವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ ಆಕೆಯನ್ನು ಬಂಧಿಸಲು ಅಂದಿನಿಂದ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆಕೆ ನೇಪಾಳಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರಬಹುದು ಎಂದು ಗುಪ್ತಚರ ಸಂಸ್ಥೆಗಳು ಹೇಳುತ್ತಿವೆ.

Get Latest updates on WhatsApp. Send ‘Add Me’ to 8550851559

Loading...