ಶಾಕಿಂಗ್ ಸತ್ಯ: ರಾಮ್ ರಹೀಮ್ ಅತ್ಯಾಚಾರಕ್ಕೆ “ಪಿತಾಜಿ ಮಾಫಿ” ಕೋಡ್ ವರ್ಡ್! – News Mirchi

ಶಾಕಿಂಗ್ ಸತ್ಯ: ರಾಮ್ ರಹೀಮ್ ಅತ್ಯಾಚಾರಕ್ಕೆ “ಪಿತಾಜಿ ಮಾಫಿ” ಕೋಡ್ ವರ್ಡ್!

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಗೆ ಸಂಬಂಧಿಸಿದ ಶಾಕಿಂಗ್ ವಿಷಯಗಳನ್ನು ಅತ್ಯಾಚಾರಕ್ಕೆ ಗುರಿಯಾದ ಇಬ್ಬರು ಸಾಧ್ವಿಗಳು ಬಹಿರಂಗಪಡಿಸಿದ್ದಾರೆ. ತಮ್ಮ ಪ್ರತ್ಯೇಕ ಕೋಣೆಯಲ್ಲಿ ಗುರ್ಮೀತ್ ಮಹಿಳೆಯರ ಮೇಲೆ ಹೇಗೆ ಅತ್ಯಾಚಾರ ನಡೆಸುತ್ತಿದ್ದರು ಎಂಬ ವಿಷಯಗಳನ್ನು ಅವರು ಪಂಚಕುಲ ಕೋರ್ಟಿನಲ್ಲಿ ವಿವರಿಸಿದ್ದಾರೆ. ಗುರ್ಮೀತ್ ಗೆ “ಗುಫಾ” ಎಂಬ ವಿಶೇಷ ನಿವಾಸವಿದೆ, ಅಲ್ಲಿಗೆ ತನಗಿಷ್ಟವಾದ ಮಹಿಳೆಯರನ್ನು ಕರೆದೊಯ್ದು ಹಲವು ಬಾರಿ ಅತ್ಯಾಚಾರ ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ.

ಕೇವಲ ಮಹಿಳಾ ಸಿಬ್ಬಂದಿ ಗುಫಾಗೆ ಕಾವಲಾಗಿ ನಿಲ್ಲುತ್ತಿದ್ದರು. “ಪಿತಾಜಿ ಮಾಫಿ” ಎಂಬ ಪದವನ್ನು ಅತ್ಯಾಚಾರಕ್ಕೆ ಪರ್ಯಾಯ ಪದವನ್ನಾಗಿ ಅಲ್ಲಿ ಬಳಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಸಾಕ್ಷಿಗಳಲ್ಲಿ ಒಬ್ಬರಾದ ಹರಿಯಾಣಾದ ಮಹಿಳೆ, ತಾನು 1999 ಜುಲೈನಿಂದ ಡೇರಾದಲ್ಲಿ ಆಶ್ರಯ ಪಡೆಯುತ್ತಿದ್ದೇನೆ, ನನಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ ನನ್ನ ಅಣ್ಣನನ್ನು ಕೊಂದರು ಎಂದು ಸಿಬಿಐ ನ್ಯಾಯಾಧೀಶರು ಎದುರು ಹೇಳಿದರು. [ಇದನ್ನೂ ಓದಿ: ರಾಮ್ ರಹೀಮ್ ಬೆಂಬಲಿಗರಿಂದ ಹಿಂಸಾಚಾರ: 13 ಸಾವು]

1999 ಆಗಸ್ಟ್ ನಲ್ಲಿ ಗುರ್ಮೀತ್ ತನ್ನ ಮೇಲೆ ಅತ್ಯಾಚಾರ ನಡೆಸುವವರೆಗೂ ನನಗೆ “ಪಿತಾಜಿ ಮಾಫಿ” ಎಂದರೇನು ಎಂಬುದೇ ತಿಳಿದಿರಲಿಲ್ಲ. ಅತ್ಯಾಚಾರಕ್ಕೊಳಗಾಗುವ ಮೊದಲು ಡೇರಾದಲ್ಲಿನ ಮಹಿಳೆಯರೆಲ್ಲರೂ ತನನ್ನು “ಪಿತಾಜಿ ಮಾಫಿ” ನಡೆಯಿತಾ? ಎಂದು ಪ್ರಶ್ನಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. 1999 ಸೆಪ್ಟೆಂಬರ್ ನಲ್ಲಿ ಗುರ್ಮೀತ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಮತ್ತೊಬ್ಬ ಮಹಿಳೆ ಹೇಳಿದ್ದಾರೆ. ಈ ವಿಷಯ ಹೊರಗೆ ಹೇಳಿದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯೂ ನೀಡಿದ್ದಾಗ ಬಹಿರಂಗಪಡಿಸಿದ್ದಳು.

Loading...