ಮೋದಿಗೆ ಶೂ ಎಸೆದರೆ ಇವನು ಕೊಡ್ತಾನಂತೆ 1 ಲಕ್ಷ – News Mirchi

ಮೋದಿಗೆ ಶೂ ಎಸೆದರೆ ಇವನು ಕೊಡ್ತಾನಂತೆ 1 ಲಕ್ಷ

ಆಡ್ ಫಿಲ್ಮ್ ಮೇಕರ್ ಹಾಗೂ ಸಾಮಾಜಿಕ ಹೋರಾಟಗಾರ ರಾಮ ಸಬ್ರಮಣಿಯನ್ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಟ್ವೀಟ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದೊಂದಿಗೂ ಕೆಲಸ ಮಾಡಿರುವ ರಾಮ್ ಸುಬ್ರಮಣಿಯನ್ ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಚಪ್ಪಲಿ ಅಥವಾ ಶೂ ಎಸೆದವರಿಗೆ ಒಂದು ಲಕ್ಷ ರೂಪಾಯಿ ನೀಡುತ್ತೇನೆ, ಭಾರತದ ಹೊಸ ಸಂಸ್ಕೃತಿಗೆ ಸ್ವಾಗತ ಎಂದು ಹೇಳಿದ್ದಾನೆ.

ವಿವಾದಿತ ‘ಪದ್ಮಾವತಿ’ ಚಿತ್ರದಲ್ಲಿ ನಟಿಸಿರುವ ಕಲಾವಿದರ ತಲೆಗೆ ಬಿಜೆಪಿ ಮುಖಂಡರೊಬ್ಬರು ಬಹುಮಾನ ಘೋಷಿಸಿದ್ದರು. ಇದರ ಬೆನ್ನಲ್ಲೇ ರಾಮ ಸುಬ್ರಮಣಿಯನ್ ಈ ಹೇಳಿಕೆ ನೀಡಿದ್ದಾರೆ.

ಈ ಟ್ವೀಟ್ ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಮ ಸುಬ್ರಮಣಿಯನ್ ಕೇಜ್ರಿವಾಲ್ ಅವರ ಸೂಚನೆಯಂತೆ ಈ ಹೇಳಿಕೆ ನೀಡಿದ್ದಾರಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...