ರಾಮಾಯಣ ಮತ್ತು ರಾಮಸೇತು ಸತ್ಯ ಎಂದ ಅಮೆರಿಕದ ಸೈನ್ಸ್ ಚಾನೆಲ್

ಶ್ರೀರಾಮ, ರಾಮಾಯಣ ವಿರುದ್ಧ ಹೇಳಿಕೆ ನೀಡಿ ಆಗಾಗ ವಿವಾದ ಸೃಷ್ಟಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಶ್ರೀರಾಮ ಮತ್ತು ರಾಮಾಯಣ ನಡೆದಿದೆ ಎಂದು ನಂಬುವವರಿದ್ದ ಹಾಗೆಯೇ, ಇಲ್ಲ ಇದು ಕಾಲ್ಪನಿಕ ಕಥೆ ಎಂದು ವಾದಿಸುವವರೂ ಇದ್ದಾರೆ. ರಾಮಾಯಣ, ಶ್ರೀರಾಮನ ಕುರಿತು ವಿವಾದವೆದ್ದಾಗಲೆಲ್ಲಾ ಶ್ರೀರಾಮ ನಿರ್ಮಿಸಿದ್ದ ರಾಮಸೇತು ಸೇತುವೆಯೂ ನೆನಪಾಗುತ್ತದೆ.

ರಾಮಾಯಣ ನಿಜವಾಗಿಯೂ ನಡೆದಿದ್ದು, ರಾಮಸೇತು ಮಾನವ ನಿರ್ಮಾಣದ ಸೇತುವೆ ಹೌದು ಎಂದು ಇತ್ತೀಚೆಗೆ ಅಮೆರಿಕನ್ ಸೈನ್ಸ್ ಚಾನೆಲ್ ಒಂದು ವರದಿ ಮಾಡಿದೆ. ಭಾರತ-ಶ್ರೀಲಂಕಾಗಳನ್ನು ಸಂಪರ್ಕಿಸುವ ರಾಮಸೇತು ಸೇತುವೆಯನ್ನು ರಾಮಾಯಣ ಕಾಲದಲ್ಲಿ ನಿರ್ಮಿಸಿದ್ದು ಸತ್ಯವೆಂದು ಆ ಚಾನೆಲ್ ವರದಿ ಮಾಡಿದೆ. ಡಿಸ್ಕವರಿ ಕಮ್ಯೂನಿಕೇಷನ್ ನ ಸೈನ್ಸ್ ಚಾನೆಲ್ ರಾಮಸೇತು ಕುರಿತು ವಿಶೇಷ ವರದಿ ತಯಾರಿಸಿದೆ.

ಭಾರತ-ಶ್ರೀಲಂಕಾ ನಡುವೆಯಿರುವ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿರುವ ರಾಮಸೇತು, ಸಂಪೂರ್ಣ ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಶ್ರೀಲಂಕಾದ ವಾಯುವ್ಯ ಭಾಗದಲ್ಲಿರುವ ಮನ್ನಾರ್ ಪ್ರದೇಶದವರೆಗೂ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆ ನಿರ್ಮಾಣಕ್ಕಾಗಿ ಉಪಯೋಗಿಸಿರುವ ಕಲ್ಲುಗಳು ನೀರಿನ ಮೇಲೆ ತೇಲುತ್ತಾ ಮರಳಿನ ಶಕ್ತಿಯಿಂದಾಗಿ ಗಟ್ಟಿಯಾಗಿ ನಿಂತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರದಿ ಸಿದ್ಧಪಡಿಸಲು ಸುಮಾರು 30 ಮೈಲಿಗಳಷ್ಟು ದೂರದವರೆಗೂ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನೆಗಳಲ್ಲಿ ಈ ಕುತೂಹಲಕಾರಿ ವಿಷಯಗಳು ತಿಳಿದುಬಂದಿವೆ. ವಿಜ್ಞಾನಿಗಳ ಸಂಶೋಧನೆಗಳೂ ಮತ್ತು ಹಿಂದೂ ನಂಬಿಕೆಗಳ ಪ್ರಕಾರ ಎರಡೂ ರೀತಿಯಿಂದ ನೋಡಿದರೂ ರಾಮಸೇತು ಸತ್ಯವೆಂದು ಚಾನೆಲ್ ಹೇಳಿದೆ.

ಸೇತುವೆಯಲ್ಲಿ ಕಂಡುಬಂದಿರುವ ಮರಳು ನೈಸರ್ಗಿಕವಾಗಿದೆ, ಆದರೆ ಅದರ ಮೇಲೆ ನಿಂತಿರುವ ಕಲ್ಲುಗಳು ಹಾಗೆ ಕಾಣುವುದಿಲ್ಲ. ಮರಳು 4 ಸಾವಿರ ವರ್ಷಗಳಷ್ಟು ಹಳೆಯದಾದರೆ, ಕಲ್ಲುಗಳು 7 ಸಾವಿರ ವರ್ಷಗಳಷ್ಟು ಹಿಂದಿನದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Get Latest updates on WhatsApp. Send ‘Subscribe’ to 8550851559