10 ಅಲ್ಲ… 20 ವರ್ಷ ಜೈಲು, 30 ಲಕ್ಷ ದಂಡ – News Mirchi

10 ಅಲ್ಲ… 20 ವರ್ಷ ಜೈಲು, 30 ಲಕ್ಷ ದಂಡ

ರೋಹಟಕ್: 15 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾಗಿ ವರದಿಯಾಗಿತ್ತು. ಆದರೆ ಅದು 10 ಅಲ್ಲ 20 ವರ್ಷ ಜೈಲು ಶಿಕ್ಷೆಯಾಗಿರುವುದಾಗಿ ಗುರ್ಮೀತ್ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎರಡು ಪ್ರಕರಣಗಳಲ್ಲಿ ತಲಾ 10 ವರ್ಷದಂತೆ ಒಟ್ಟು 20 ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ ಎಂದು ವಕೀಲ ಎಸ್.ಕೆ. ಗಾರ್ಗ್ ನರ್ವಾನಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ಒಂದೊಂದು ಪ್ರಕರಣದಲ್ಲೂ 15 ಲಕ್ಷ ರೂಪಾಯಿಯಂತೆ ಒಟ್ಟು 30 ಲಕ್ಷ ರೂಪಾಯಿ ದಂಡವನ್ನು ನ್ಯಾಯಾಲಯವು ವಿಧಿಸಿದ್ದು, ಇಬ್ಬರೂ ಸಂತ್ರಸ್ತ ಮಹಿಳೆಯರಿಗೆ ತಲಾ 14 ಲಕ್ಷ ರೂಪಾಯಿ ನೀಡಬೇಕು ಎಂದು ಕೋರ್ಟ್ ತೀರ್ಪಿತ್ತಿದೆ ಎಂದು ವಕೀಲರು ವಿವರಿಸಿದ್ದಾರೆ. ಇಲ್ಲಿಯವರೆಗೂ ಹತ್ತು ವರ್ಷಗಳು ಅಂದುಕೊಂಡಿದ್ದ ಗುರ್ಮೀತ್ ಬೆಂಬಲಿಗರಿಗೆ ಮತ್ತಷ್ಟು ನಿರಾಸೆಯಾದರೆ, ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.

ಗುರ್ಮೀತ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ನಂತರ ಶುಕ್ರವಾರ ಭುಗಿಲೆದ್ದ ಹಿಂಸಾಚಾರ ಮರುಕಳಿಸಿದಂತೆ ರೋಹಟಕ್ ಜೈಲಿನಲ್ಲಿಯೇ ವಿಚಾರಣೆ ನಡೆಸಲಾಯಿತು. ನ್ಯಾಯಾಧೀಶರ ಆದೇಶದಂತೆ ಜೈಲಿನಲ್ಲಿಯೇ ವಿಶೇಷ ಕೋರ್ಟ್ ರೂಮ್ ಸಿದ್ಧಗಳಿಸಲಾಗಿತ್ತು. ಸರ್ಕಾರಿ ಹೆಲಿಕಾಪ್ಟರ್ ನಿಂದ ನ್ಯಾಯಾಧೀಶರು ರೋಹಟಕ್ ಜೈಲು ತಲುಪಿದರು. ಎರಡೂ ಕಡೆಯ ವಕೀಲರಿಗೆ ವಾದಿಸಲು ತಲಾ 10 ನಿಮಿಷಗಳ ಕಾಲಾವಕಾಶವನ್ನು ನೀಡಿದ ನ್ಯಾಯಾಧೀಶರಾದ ಜಗದೀಪ್ ಸಿಂಗ್, ನಂತರ ಶಿಕ್ಷೆಯ ಪ್ರಮಾಣ ಘೋಷಿಸಿದರು.

[ಇದನ್ನೂ ಓದಿ: ಶಾಕಿಂಗ್ ಸತ್ಯ: ರಾಮ್ ರಹೀಮ್ ಅತ್ಯಾಚಾರಕ್ಕೆ ಪಿತಾಜಿ ಮಾಫಿ ಕೋಡ್ ವರ್ಡ್!]

ಶಿಕ್ಷೆ ಪ್ರಕಟವಾದ ನಂತರ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಜೈಲಿನಲ್ಲಿಯೇ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಿಯಮಗಳ ಪ್ರಕಾರ ಆತನಿಗೆ ಸೆಲ್ ಮೀಸಲಿರಿಸಿ, ಶಿಕ್ಷೆ ಅನುಭವಿಸುತ್ತಿರುವ ಖೈದಿಗಳಿಗೆ ನೀಡುವ ಬಿಳಿ ಉಡುಪು ನೀಡಿದರು. ಇಷ್ಟು ದಿನ ಬಣ್ಣ ಬಣ್ಣದ ಉಡುಪುಗಳಲ್ಲಿ ಮಿಂಚುತ್ತಿದ್ದ ಬಾಬಾಗೆ ಇನ್ನು 20 ವರ್ಷಗಳ ಕಾಲ ಬಿಳಿ ಬಟ್ಟೆಯೇ ಗತಿ.

Loading...