ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ

ದೇಶದ ರಾಜಧಾನಿ ದೆಹಲಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಲೋಕಲ್ ಟ್ರೈನ್ ನ ಮಹಿಳಾ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದ 32 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ನಂತರ ಆಕೆಯ ಬಳಿಯಿದ್ದ ಹಣ ಅಪಹರಿಸಿದ ವ್ಯಕ್ತಿಗಳು ಪರಾರಿಯಾಗಿದ್ದಾರೆ.

ಶಾದ್ರಾ ರೈಲ್ವೆ ನಿಲ್ದಾಣದಲ್ಲಿ ಐದು ಮಹಿಳೆಯರು ಮಹಿಳೆಯರ ಕೋಚ್ ಗೆ ಹತ್ತಿದ್ದಾರೆ. ಅದಾಗಲೇ ಅಲ್ಲಿ ಮೂವರು ಕಿರಾತಕರು ಹತ್ತಿ ಕೂತಿದ್ದರು. ಮಹಿಳೆಯೊಬ್ಬರ ಬಳಿ ಇದ್ದ ಬ್ಯಾಗ್ ಕಸಿಯುವ ಪ್ರಯತ್ನ ಮಾಡಿದರು. ಪಕ್ಕದಲ್ಲಿದ್ದ ಮಹಿಳೆಯರು ಪ್ರತಿಭಟಿಸುವ ಪ್ರಯತ್ನ ಮಾಡಿದರೂ ಇಬ್ಬರು ವ್ಯಕ್ತಿಗಳು ಬ್ಯಾಗ್ ಕಸಿದು ಪರಾರಿಯಾದರು. ಉಳಿದ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಆ ಸಮಯದಲ್ಲಿ ರೈಲಿನಲ್ಲಿ ಒಬ್ಬ ರೈಲ್ವೇ ಪೊಲೀಸ್ ಪೇದೆಯೂ ಇರಲಿಲ್ಲ. ತಡವಾಗಿ ಎಚ್ಚೆತ್ತುಕೊಂಡ ರೈಲ್ವೆ ಪೊಲೀಸರು ರೈಲು ಓಲ್ಡ್ ಡೆಲ್ಲಿ ರೈಲ್ವೇ ಸ್ಟೇಷನ್ ತಲುಪುತ್ತಿದ್ದಂತೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಶಾಬಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.