ಬಡತನದ ಕಾರಣಕ್ಕೆ ಅತ್ಯಾಚಾರ ನಡೆಸಿದವನನ್ನೇ ಮದುವೆಯಾದ ಅಪ್ರಾಪ್ತ ಬಾಲಕಿ – News Mirchi

ಬಡತನದ ಕಾರಣಕ್ಕೆ ಅತ್ಯಾಚಾರ ನಡೆಸಿದವನನ್ನೇ ಮದುವೆಯಾದ ಅಪ್ರಾಪ್ತ ಬಾಲಕಿ

ಬಡತನ ಮತ್ತು ಕೋರ್ಟ್ ವೆಚ್ಚಗಳನ್ನು ಪೋಷಕರು ಭರಿಸಲು ಅಸಹಾಯಕರಾದ ಕಾರಣದಿಂದಾಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನೇ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಕಾನೂನಿನ ಪ್ರಕಾರ 20 ವಾರಗಳು ಮೀರಿದ್ದರಿಂದ ಗರ್ಭಪಾತಕ್ಕೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ನಂತರ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು.

ತನ್ನ ಹಾಗೂ ತನ್ನ ಮಗುವನ್ನು ಪೋಷಿಸಲು ಬಡವರಾದ ತನ್ನ ತಂದೆತಾಯಿಗಳು ಅಶಕ್ತರಾಗಿದ್ದಾರೆ, ಹಾಗಾಗಿ ಹಿರಿಯರ ಮಧ್ಯಪ್ರವೇಶದಿಂದ ಅತ್ಯಾಚಾರ ನಡೆಸಿದವನನ್ನೇ ಮದುವೆಯಾಗಿರುವುದಾಗಿ ಬಾಲಕಿ ಹೇಳಿದ್ದಾಳೆ. ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಇದೀಗ ಇಬ್ಬರೂ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ನೋಂದಣಿ ಮಾಡಿಸಲು ಹೊರಟಿರುವುದರಿಂದ ಈ ಪ್ರಕರಣ ರದ್ದಾಗಲಿದೆ.

ಅರುಣ್ ಜೇಟ್ಲಿಯವರನ್ನು ನಿಂದಿಸುವಂತೆ ಸೂಚಿಸಿದ್ದೇ ಕೇಜ್ರಿವಾಲ್: ಜೇಠ್ಮಲಾನಿ

ನ್ಯಾಯಾಲಯದಲ್ಲಿ ಹೋರಾಡಲು ನನಗೆ ಶಕ್ತಿ ಇಲ್ಲ. ಹೀಗಾಗಿ ಊರ ಹಿರಿಯರ ಭರವಸೆಯಂತೆ ಅತ್ಯಾಚಾರ ನಡೆಸಿದವನೊಂದಿಗೆ ಮದುವೆ ಮಾಡಿಕೊಟ್ಟಿರುವುದಾಗಿ ಬಾಲಕಿಯ ಅಸಹಾಯಕ ತಂದೆ ಹೇಳಿದ್ದಾರೆ. ಬಾಲಕಿ ಮತ್ತು ಮಗುವನ್ನು ಒಪ್ಪಿಕೊಳ್ಳುವ ಮೂಲಕ ತನ್ನ ತಪ್ಪನ್ನು ತಿದ್ದುಕೊಳ್ಳುವುದಾಗಿ ಅತ್ಯಾಚಾರ ಆರೋಪಿ ಹೇಳಿದ್ದಾನೆ.

Contact for any Electrical Works across Bengaluru

Loading...
error: Content is protected !!