ಡಿಕ್ಕಿ ಹೊಡೆದು 100 ಮೀಟರ್ ಎಳೆದೊಯ್ದ ಬೈಕ್, ಯುವತಿ ಸಾವು |News Mirchi

ಡಿಕ್ಕಿ ಹೊಡೆದು 100 ಮೀಟರ್ ಎಳೆದೊಯ್ದ ಬೈಕ್, ಯುವತಿ ಸಾವು

ಮುಂಬೈ: ಅತಿ ವೇಗವಾಗಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಸಿಕ್ಕಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಕೆಬಿಪಿ ಹಿಂದೂಜಾ ಕಾಲೇಜು ವಿದ್ಯಾರ್ಥಿನಿ ಗಿರಿಜಾ ಅಂಬಾಲಾ(19) ಸಾವನ್ನಪ್ಪಿದ್ದು, ಆಕೆಯ ಜೊತೆ ರಸ್ತೆ ದಾಟುತ್ತಿದ್ದ ಸ್ನೇಹಿತ ಕುನಾಲ್ ಸುರೇಂದ್ರ ವೈದ್ಯ ಅವರು ಗಾಯಗೊಂಡಿದ್ದಾರೆ. ಗಿರಿಜಾ ಮತ್ತು ಕುನಾಲ್ ಶನಿವಾರ ರಾತ್ರಿ 9:30 ರ ವೇಳೆಯಲ್ಲಿ ರಸ್ತೆ ದಾಟುತ್ತಿದ್ದರು. ಆ ಸಂದರ್ಭದಲ್ಲಿ ಮೂವರು ವ್ಯಕ್ತಿಗಳಿದ್ದ ದ್ವಿಚಕ್ರ ವಾಹನವೊಂದು ವೇಗವಾಗಿ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಬೈಕಿನಲ್ಲಿದ್ದ ಒಬ್ಬ ವ್ಯಕ್ತಿಗೂ ಗಾಯಗಳಾಗಿದ್ದು, ಉಳಿದ ಇಬ್ಬರು ಪರಾರಿಯಾಗಿದ್ದಾರೆ.

ಗಿರಿಜಾಳಿಗೆ ಬೈಕ್ ಡಿಕ್ಕಿ ಹೊಡೆದಾಗ ಆಕೆಯ ಬಟ್ಟೆ ಬೈಕಿನ ಚಕ್ರಕ್ಕೆ ಸಿಲುಕಿದೆ. ಹೀಗಾಗಿ ಬೈಕ್ ಸುಮಾರು 100 ಮೀಟರು ಆಕೆಯನ್ನು ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ಹಲವು ಬಾರಿ ಆಕೆಯ ತಲೆ ರಸ್ತೆ ವಿಭಜಕಕ್ಕೆ ಬಡಿದ ಪರಿಣಾಮ ಆಕೆಯ ತಲೆಬುರುಡೆ ಛಿದ್ರವಾಗಿದೆ ಎಂದು ಕುನಾಲ್ ತಂದೆ ಶಿವೇಂದ್ರ ವೈದ್ಯ ಹೇಳಿದ್ದಾರೆ.

ಅಪಘಾತವನ್ನು ನೋಡಿದ ವ್ಯಕ್ತಿಯೊಬ್ಬರು ತನ್ನ ಕಾರಿನ ಚಾಲಕನ ಮೂಲಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಗಿರಿಜಾ ಭಾನುವಾರ ಸಾವನ್ನಪ್ಪಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿಜಾ ತಂದೆ, ತನ್ನ ಮಗಳು ತುಂಬಾ ಬುದ್ದಿವಂತ ವಿದ್ಯಾರ್ಥಿಯಾಗಿದ್ದಳು. ಫೆಬ್ರವರಿ 1 ರಂದು 20ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಳು. ಜನರು ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಬೇಕು. ತನ್ನ ಮಗಳಿಗೆ ಹೀಗಾಗಲು ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಗಿರಿಜಾ ಮೆದುಳು ನಿರ್ಜೀವವಾಗಿದೆ ಎಂದು ತಿಳಿಯುತ್ತಿದ್ದಂತೆ ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ಬಯಸಿದ್ದರಾದರೂ, ಆಕೆಯ ಹೆಚ್ಚು ರಕ್ತ ಕಳೆದುಕೊಂಡ ಕಾರಣ ಆಕೆಯ ಅಂಗಾಂಗಗಳನ್ನು ಬಳಸಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ.

English Summary: A speeding bike took the life of a student Girija Ambala(19) and injured her friend Kunal Surendra Vaidya(21). One of the three people on the vehicle has also been severely injured. the other two people were on bike are absconding.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!