ರವಿಶಾಸ್ತ್ರಿ ಟೀಮ್ ಇಂಡಿಯಾ ಪ್ರಧಾನ ಕೋಚ್, ಬಿಸಿಸಿಐ ಪ್ರಕಟಣೆ – News Mirchi

ರವಿಶಾಸ್ತ್ರಿ ಟೀಮ್ ಇಂಡಿಯಾ ಪ್ರಧಾನ ಕೋಚ್, ಬಿಸಿಸಿಐ ಪ್ರಕಟಣೆ

ಹಲವು ದಿನಗಳ ಕುತೂಹಲಗಳಿಗೆ ತೆರೆ ಬಿದ್ದಿದೆ. ಟೀಮ್ ಇಂಡಿಯಾ ಕೋಚ್ ಯಾರು ಎಂಬುದನ್ನು ಬಿಸಿಸಿಐ ಕೊನೆಗೂ ಪ್ರಕಟಿಸಿದೆ. ಅನಿಲ್ ಕುಂಬ್ಳೆ ನಂತರ ರವಿಶಾಸ್ತ್ರಿಯನ್ನು ಪ್ರಧಾನ ತರಬೇತುದಾರರಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಸೋಮವಾರ ಸ್ಕೈಪ್ ಮೂಲಕ ಕ್ರಿಕೆಟ್ ಸಲಹಾ ಸಮಿತಿ ಅಭ್ಯರ್ಥಿಗಳ ಸಂದರ್ಶನ ನಡೆಸಿತ್ತು. ಸಂದರ್ಶನದಲ್ಲಿ ವೀರೇಂದರ್ ಸೆಹವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್ ಮತ್ತು ಲಾಲ್ ಚಂದ್ ರಜಪೂತ್ ಕೂಡಾ ಪಾಲ್ಗೊಂಡಿದ್ದರು.

ಈ ಹಿಂದೆ ಟೀಮ್ ಇಂಡಿಯಾ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ರವಿಶಾಸ್ತ್ರಿಯವರಿಗೆ ಕ್ರಿಕೆಟ್ ಸಲಹಾ ಮಂಡಳಿ ಜವಾಬ್ದಾರಿ ನೀಡಲು ನಿರ್ಧರಿಸಿ ಪ್ರಕಟಿಸಿದೆ. ಕೆಲ ನಿಮಿಷಗಳವರೆಗೂ ವೀರೇಂದ್ರ ಸೆಹವಾಗ್ ಅವರಿಗೇ ಕೋಚ್ ಹುದ್ದೆಯ ಅವಕಾಶಗಳು ಹೆಚ್ಚಾಗಿವೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಅಂತಿಮವಾಗಿ ರವಿಶಾಸ್ತ್ರಿಯನ್ನು ಆಯ್ಕೆ ಮಾಡಿ ಬಿಸಿಸಿಐ ಪ್ರಕಟಿಸಿದೆ.

ಚೀನಾ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತೀಯ ಸೇನೆ

ಜುಲೈ 10 ರಂದೇ ಪ್ರಧಾನ ಕೋಚ್ ಯಾರೆಂಬ ತೀರ್ಮಾನ ಹೊರಬೀಳುತ್ತದೆ ಎನ್ನಲಾಗುತ್ತಿತ್ತು. ಆದರೆ ಅಭ್ಯರ್ಥಿಗಳ ಸಂದರ್ಶನ ನಡೆಸಿದ ನಂತರ ಮೌನಕ್ಕೆ ಶರಣಾಗಿತ್ತು. ಆದರೆ ಮಂಗಳವಾರ ಕೋಚ್ ಹೆಸರು ಪ್ರಕಟಿಸುವಂತೆ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಕ್ರಿಕೆಟ್ ಸಲಹಾ ಸಮಿತಿಗೆ ಸೂಚಿಸಿದ್ದರು.

ಉಪರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ….

Click for More Interesting News

Loading...
error: Content is protected !!