ಎಲ್ಲಾ 10 ರೂ. ನಾಣ್ಯ ಅಸಲಿ, ವದಂತಿ ನಂಬದಿರಿ

ಇತ್ತೀಚೆಗೆ ನಕಲಿ 10 ರೂಪಾಯಿ ನಾಣ್ಯಗಳ ಬಗ್ಗೆ ವದಂತಿಗಳು ಹರಡುತ್ತಿವೆ. ದೊಡ್ಡ ಗಾತ್ರದ ಹತ್ತು ರೂಪಾಯಿಯ ಗುರುತಿರುವ ನಾಣ್ಯ ನಕಲಿ, ಇಲ್ಲದಿರುವ ನಾಣ್ಯ ಅಸಲಿ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.

ದೀರ್ಘ ಕಾಲದಿಂದ ಚಲಾವಣೆಯಲ್ಲಿರುವುದರಿಂದ ನಾಣ್ಯಗಳು ವಿವಿಧ ರೂಪಗಳಲ್ಲಿ, ವಿವಿಧ ವಿನ್ಯಾಸಗಳಲ್ಲಿ ಕಾಣಿಸುವುದು ಸಹಜ ಎಂದು ಆರ್‌ಬಿಐ ಹೇಳಿದೆ. ದೊಡ್ಡ ಗಾತ್ರದಲ್ಲಿ ಹತ್ತು ರೂಪಾಯಿ ಗುರುತಿರುವ ಮತ್ತು ಇಲ್ಲದಿರುವ ನಾಣ್ಯಗಳೂ ಚಲಾವಣೆಯಲ್ಲಿವೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟ ಪಡಿಸಿದ್ದು ವದಂತಿಗಳನ್ನು ನಂಬಬೇಡಿ ಎಂದು ಹೇಳಿದೆ. ಜನ ತಮ್ಮ ವ್ಯವಹಾರಗಳಲ್ಲಿ ಎಲ್ಲಾ ನಾಣ್ಯಗಳನ್ನು ಹಿಂಜರಿಕೆಯಿಲ್ಲದೆ ಬಳಸಬಹುದು ಎಂದು ಹೇಳಿದೆ.