Big Breaking News

ಸಿಹಿ ಸುದ್ದಿ, ನಗದು ವಿತ್ ಡ್ರಾ ಮಾಡುವ ಮಿತಿ ಹೆಚ್ಚಳ

ನವದೆಹಲಿ: ನೋಟಿನ ಸಮಸ್ಯೆಗಳನ್ನು ಬಗೆಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಮತ್ತಷ್ಟು ಕ್ರಮಗಳನ್ನು ಪ್ರಕಟಿಸಿದೆ. ಕರೆಂಟ್, ಓವರ್ ಡ್ರಾಫ್ಟ್, ಕ್ಯಾಷ್ ಕ್ರೆಡಿಟ್ ಖಾತೆಗಳನ್ನು ಹೊಂದಿದವರಿಗೆ ವಿತ್ ಡ್ರಾ ಮಾಡುವ ಮಿತಿಯನ್ನು ವಾರದಲ್ಲಿ ರೂ. 50 ಸಾವಿರಕ್ಕೆ ಹೆಚ್ಚಳ ಮಾಡಿದೆ. ಇವರಿಗೆ ರೂ. 2 ಸಾವಿರ ಮುಖ ಬೆಲೆಯ ನೋಟು ನೀಡುತ್ತಾರೆ. ಕನಿಷ್ಠ ಮೂರು ತಿಂಗಳಿಗಿಂದ ಖಾತೆ ನಿರ್ವಹಿಸುತ್ತಿರುವವರಿಗೆ ಇದು ಅನ್ವಯವಾಗುತ್ತದೆ.

Download Free

ರೈತರ ಕಡೆ ಕೂಡಾ ಆರ್.ಬಿ.ಐ ಗಮನ ಹರಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಳಿಗೆಗಳಲ್ಲಿ ರದ್ದಾಗಿರುವ 500 ಮುಖ ಬೆಲೆಯ ನೋಟು ನೀಡಿ ಬಿತ್ತನೆ ಬೀಜ ಕೊಳ್ಳಲು ಅನುಮತಿ ನೀಡಿದೆ. ರೈತರು ದೃಢೀಕೃತ ಗುರುತಿನ ಚೀಟಿ ತೋರಿಸದಿ ಬಿತ್ತನೆ ಬೀಜ ಖರೀದಿಸಬಹುದು. ವಿವಾಹಗಳಿಗೆ ನಾಳೆಯಿಂದ(ಮಂಗಳವಾರ) ರೂ. 2.5 ಲಕ್ಷ ವಿತ್ ಡ್ರಾ ಮಾಡುವ ಸೌಲಭ್ಯ ಸಿಗಲಿದೆ. ಇದಕ್ಕೂ ಮುನ್ನ ಈ ಕುರಿತು ಪ್ರಕಟಿಸಿದ್ದರೂ, ಕೊರತೆಯಿಂದ ಇದು ಜಾರಿಗೆ ಬಂದಿರಲಿಲ್ಲ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache