ಡಾಲರ್ ಎದುರು ರುಪಾಯಿ ಕುಸಿತ, ಆರ್‌ಬಿಐ ಮಧ್ಯಪ್ರವೇಶ

ಡಾಲರ್ ಎದುರು ರೂಪಾಯಿ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಗುರುವಾರ ಬೆಳಗ್ಗೆ ಸುಮಾರು ರೂ. 68.80 ಗೆ ಕುಸಿದ ರೂಪಾಯಿ ಬೆಲೆಯನ್ನು ತಡೆಯಲು ಭಾರೀ ಪ್ರಮಾಣದ ಡಾಲರ್ ಮಾರಾಟ ಮಾಡಿದೆ. ಇದರಿಂದಾಗಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದ್ದ ರೂಪಾಯಿ ಬೆಲೆ ಸ್ವಲ್ಪ ಚೇತರಿಸಿಕೊಂಡಿತು. 68.80 ರಿಂದ ರೀಬೌಂಡ್ ಆಗಿ 68.67 ಗೆ ನಿಂತಿದೆ.

ಸುಮಾರು 500 ಮಿಲಿಯನ್ ಡಾಲರ್‌ಗಳನ್ನು ರಿಸರ್ವ್ ಬ್ಯಾಕ್ ಮಾರಿದೆ ಎಂದು ಟ್ರೇಡರ್ಸ್ ಹೇಳಿದ್ದಾರೆ. ಅರ್‌ಬಿಐ ಮಧ್ಯ ಪ್ರವೇಶದಿಂದ ಕನಿಷ್ಟ ಮಟ್ಟಕ್ಕೆ ಕುಸಿದಿದ್ದ ರೂಪಾಯಿ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ.