ವರ್ಷಪೂರ್ತಿ ಅನ್ಲಿಮಿಟೆಡ್ ಡಾಟಾ ಕೇವಲ 70 ರೂಪಾಯಿಗೆ – News Mirchi

ವರ್ಷಪೂರ್ತಿ ಅನ್ಲಿಮಿಟೆಡ್ ಡಾಟಾ ಕೇವಲ 70 ರೂಪಾಯಿಗೆ

ರಿಲಯನ್ಸ್ ಜಿಯೋ ಪ್ರವೇಶದಿಂದಾಗಿ ಗ್ರಾಹಕರಿಗೆ ಹಬ್ಬವೋ ಹಬ್ಬ… ಜಿಯೋ ಹೊಡೆತಕ್ಕೆ ಸಿಕ್ಕ ಏರ್ಟೆಲ್, ವೊಡಾಫೋನ್, ಬಿಎಸ್ಎನ್ಎಲ್, ಮುಂತಾದ ಟೆಲಿಕಾಂ ಸಂಸ್ಥೆಗಳೆಲ್ಲಾ ಆಫರ್ ಮೇಲೆ ಆಫರ್ ಘೋಷಿಸುತ್ತಿವೆ. ಇದೀಗ ಮುಖೇಶ್ ಅಂಬಾನಿ ಅವರ ಜಿಯೋ ಹೊಡೆತಕ್ಕೆ ಅವರ ತಮ್ಮ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಮೊಬೈಲ್ “ಡಾಟಾ ಕೀ ಆಜಾದಿ” ಹೆಸರಿನ ಆಫರ್ ಘೋಷಿಸಿದೆ. ಈ ಪ್ಲಾನ್ ಅಡಿಯಲ್ಲಿ 70 ರೂಪಾಯಿಗಳಿಗೆ ಗ್ರಾಹಕರು ವರ್ಷ ಪೂರ್ತಿ 2ಜಿ ಡಾಟಾ ಪಡೆಯಲಿದ್ದಾರೆ. ಡಾಟಾ ಜೊತೆ 56 ರೂಪಾಯಿಗಳ ಟಾಕ್ ಟೈಮ್ ಕೂಡಾ ಪಡೆಯಬಹುದು.

 

ಈ ಆಫರ್ ಆಗಸ್ಟ್ 14 ರಿಂದ ಆಗಸ್ಟ್ 16 ರವರೆಗೆ ಲಭ್ಯವಿರುತ್ತದೆ. ರಿಲಯನ್ಸ್ ಡಾಟಾ ಕೀ ಆಜಾದಿಯೊಂದಿಗೆ 70 ರೂಪಾಯಿಗಳಿಗೆ ಒಂದು ವರ್ಷ ಅನಿಯಮಿತ 2ಜಿ ಡಾಟಾ ಪಡೆಯಬಹುದು ಎಂದು ರಿಲಯನ್ಸ್ ಮೊಬೈಲ್ ಸೋಮವಾರ ಒಂದು ಟ್ವೀಟ್ ಮಾಡಿದೆ. ಇಂಡಿಪೆಂಡೆನ್ಸ್ ಡೇ ಪ್ರಯುಕ್ತ ಈ ಸ್ಪೆಷಲ್ ಆಫರ್ ನೀಡುತ್ತಿರುವುದಾಗಿ ಜಾಹೀರಾತಿನಲ್ಲಿ ಹೇಳಿದೆ. ಮತ್ತೊಂದು ಕಡೆ ಜಿಯೋ ಗೆ ಸ್ಪರ್ಧೆ ನೀಡಲು 4 ದಿನಗಳ ಹಿಂದೆಯಷ್ಟೇ ರೂ.299 ಮಾಸಿಕ ಪ್ಲಾನ್ ಅನ್ನು ರಿಲಯನ್ಸ್ ಮೊಬೈಲ್ ಪ್ರಕಟಿಸಿತ್ತು. ಇದರ ಪ್ರಕಾರ ಗ್ರಾಹಕರು ಅನಿಯಮಿತ ಕರೆ, ಸಂದೇಶ, ಡಾಟಾ ಪಡೆಯಬಹುದು ಎಂದು ಹೇಳಿದೆ. ಇನ್ನು ಜೂನ್ ಗೆ ಮುಗಿದ ತ್ರೈಮಾಸಿಕದಲ್ಲಿ ಆರ್ ಕಾಮ್ ರೂ. 1,210 ಕೋಟಿ ನಷ್ಟ ಅನುಭವಿಸಿದೆ. ಸಾಲದ ಶೂಲದಲ್ಲಿ ಸಿಲುಕಿರುವ ಆರ್ ಕಾಮ್ ಈ ನಷ್ಟಗಳನ್ನು ಪ್ರಕಟಿಸಿರುವುದು ಇದು ಮೂರನೇ ಬಾರಿ.

Loading...