ಗೋಮಾರಾಟ ನಿಷೇಧಕ್ಕೆ ತಡೆ: ಇನ್ನು ದೇಶಾದ್ಯಂತ ಅನ್ವಯ – News Mirchi
We are updating the website...

ಗೋಮಾರಾಟ ನಿಷೇಧಕ್ಕೆ ತಡೆ: ಇನ್ನು ದೇಶಾದ್ಯಂತ ಅನ್ವಯ

ಕಸಾಯಿಖಾನೆಗಳಿಗೆ ಜಾನುವಾರು ಮಾರುಕಟ್ಟೆಗಳಿಂದ ಗೋಮಾರಾಟ ಅಥವಾ ಖರೀದಿಯನ್ನು ನಿಷೇಧಿಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ತಂದಿದ್ದು ತಿಳಿದದ್ದೇ. ಆದರೆ ಇದೀಗ ಒಂದು ಹೆಜ್ಜೆ ಹಿಂದಿಟ್ಟಿರುವ ಕೇಂದ್ರ ಸರ್ಕಾರ, ಸಾರ್ವಜನಿಕರಿಂದ ಆಕ್ಷೇಪಗಳು ಕೇಳಿಬಂದ ಕಾರಣ, ಕೆಲ ಅಂಶಗಳನ್ನು ಮರು ಪರಿಗಣಿಸುತ್ತೇವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

ಈಗಾಗಲೇ ಮದ್ರಾಸ್ ಹೈಕೋರ್ಟ್ ನ ಮಧುರೈ ನ್ಯಾಯಪೀಠವು ಹೊಸ ನಿಯಮಗಳಿಗೆ ತಡೆ ನೀಡಿದ್ದು, ಈ ತಡೆಯನ್ನು ದೇಶಾದ್ಯಂತ ವಿಸ್ತರಿಸಲು ತಮ್ಮದು ಯಾವುದೇ ಆಕ್ಷೇಪವಿಲ್ಲ ಎಂದು ಸರ್ಕಾರ ಹೇಳಿದೆ. ನಂತರ ಮದ್ರಾಸ್ ಹೈಕೋರ್ಟ್ ನೀಡಿದ್ದ ತಡೆಯನ್ನು ದೇಶಾದ್ಯಂತ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್ ವಿಸ್ತರಿಸಿದೆ.

ಉಪರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ

ನಿಯಮಗಳಲ್ಲಿನ ಕೆಲ ಅಂಶಗಳನ್ನು ಮರು ಪರಿಗಣಿಸುತ್ತೇವೆ ಎಂದರೆ ಅವುಗಳನ್ನು ರದ್ದುಗೊಳಿಸುತ್ತೇವೆ ಎಂದು ಅರ್ಥವಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಅವರು ಸ್ಪಷ್ಟಪಡಿಸಿದ್ದಾರೆ.

Contact for any Electrical Works across Bengaluru

Loading...
error: Content is protected !!