ಪೋಪ್, ಅಮೆರಿಕಾ ಅಧ್ಯಕ್ಷರ ನಂತರ ಆ ಸ್ವಾಗತ ಮೋದಿಗೆ ಮಾತ್ರ – News Mirchi

ಪೋಪ್, ಅಮೆರಿಕಾ ಅಧ್ಯಕ್ಷರ ನಂತರ ಆ ಸ್ವಾಗತ ಮೋದಿಗೆ ಮಾತ್ರ

ಇಸ್ರೇಲ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಘನ ಸ್ವಾಗತ ನೀಡಲು ಇಸ್ರೇಲ್ ಪ್ರಧಾನಿ ನೆತನ್ಯಾಹು ಮುಂದಾಗಿದ್ದಾರೆ. ಇಸ್ರೇಲ್ ಗೆ ಆಗಮಿಸುವ ಅತಿಥಿಗಳಲ್ಲಿ ಪೋಪ್, ಮತ್ತು ಅಮೆರಿಕಾ ಅಧ್ಯಕ್ಷರನ್ನು ಮಾತ್ರ ಸ್ವತಃ ಇಸ್ರೇಲ್ ಪ್ರಧಾನಿ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸುತ್ತಾರೆ.

ಈಗ ಅದೇ ಘನತೆ ನಮ್ಮ ದೇಶದ ಪ್ರಧಾನಿಗೆ ದಕ್ಕಲಿದೆ. ಮೋದಿಯವರನ್ನು ಸ್ವತಃ ನೆತನ್ಯಾಹು ಸ್ವಾಗತಿಸಲಿದ್ದಾರೆ. ಆ ನಂತರ ಕಿಂಗ್ ಡೇವಿಡ್ ಹೋಟೆಲ್ ನಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಅತ್ಯಂತ ಬಿಗಿ ಭದ್ರತೆಯಿರುವ ಇದೇ ಹೋಟೆಲ್ ನಲ್ಲಿ ಈ ಹಿಂದೆ ಡೊನಾಲ್ಡ್ ಟ್ರಂಪ್ ವಾಸ್ತವ್ಯ ಹೂಡಿದ್ದರು. ಮೋದಿ ಪಾಲ್ಗೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಬೇಕೆಂದು ನೆತನ್ಯಾಹು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹೆಜ್ಜೆ ಹೆಜ್ಜೆಗೂ ಅವರ ಜತೆಗೊದ್ದು, ಸ್ನೇಹವನ್ನು ಆದಷ್ಟು ಹೆಚ್ಚು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದಾರೆ.

ಇಸ್ರೇಲ್ ನಲ್ಲಿ ಡೊನಾಲ್ಡ್ ಟ್ರಂಪ್

ಎರಡೂ ದೇಶಗಳಿಗೆ ಲಾಭವಾಗುವ ವಿವಿಧ ಅಂಶಗಳ ಮೇಲೆ ನೆತನ್ಯಾಹು, ಮೋದಿಯವರ ನಡುವೆ ಚರ್ಚೆ ನಡೆಯಲಿದೆ. ಮೋದಿಗೆ ವಿಶೇಷ ಔತಣಕೂಟವನ್ನು ಅವರು ಆಯೋಜಿಸಲಿದ್ದಾರೆ. ನಾಳೆ ನಡೆಯುವ ಕಮ್ಯೂನಿಟಿ ರಿಸೆಪ್ಷನ್ ನಲ್ಲಿ ಕೂಡಾ ಮೋದಿ, ನೆತನ್ಯಾಹು ಒಟ್ಟಿಗೆ ಭಾಗವಹಿಸಲಿದ್ದಾರೆ. ಹೈಫಾದಲ್ಲಿನ ಭಾರತೀಯ ಸೈನಿಕರ ಸ್ಮಾರಕದ ಬಳಿ ಮೋದಿ ನಮನ ಸಲ್ಲಿಸಲಿದ್ದಾರೆ. ನಂತರ 26/11 ಮುಂಬೈ ದಾಳಿಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ ಹೋಲ್ಟ್ ಬೆರ್ಗ್ ಮೊಷೇಯನ್ನು ಮೋದಿ ಭೇಟಿ ಮಾಡಲಿದ್ದಾರೆ. ಆ ನಂತರ ಭಾರತೀಯ ಸಮುದಾಯದ ಜೊತೆ ಮಾತನಾಡುವ ಮೋದಿ, ಜರ್ಮನಿಯಲ್ಲಿ ನಡೆಯುವ 12ನೇ ಜಿ-20 ಶೃಂಗಸಭೆಗೆ ಹಾಜರಾಗಲು ಹೋಂಬರ್ಗ್ ಗೆ ತೆರಳಲಿದ್ದಾರೆ.

Loading...