2 ಗ್ರಾಂ ಚಿನ್ನದಿಂದ ಕೆಂಪುಕೋಟೆ! – News Mirchi
We are updating the website...

2 ಗ್ರಾಂ ಚಿನ್ನದಿಂದ ಕೆಂಪುಕೋಟೆ!

ಚೆನ್ನೈ: ತಮಿಳುನಾಡಿನ ಚಿದಂಬರಂ ನಿವಾಸಿ, ಆಭರಣ ತಯಾರಕರೊಬ್ಬರು ಕೇವಲ 2 ಗ್ರಾಂ ಚಿನ್ನ ಬಳಸಿ ಪುಟ್ಟ ಕೆಂಪು ಕೋಟೆಯನ್ನು ತಯಾರಿಸಿ ದೇಶಭಕ್ತಿಯನ್ನು ಮೆರೆದಿದ್ದಾರೆ. ಚಿದಂಬರಂನಲ್ಲಿನ ವಿಶ್ವನಾಥನ್ ಪಿಳ್ಳೈ ಬೀದಿಯ ಜಯಪಾಲ್ ಪತ್ತರ್ ಎಂಬುವವರ ಪುತ್ರ ಜೆ.ಮುತ್ತುಕುಮಾರನ್(36) ಆಭರಣ ವ್ಯಾಪಾರ ನಡೆಸುತ್ತಿದ್ದಾರೆ. ಹಾಗೆಯೇ ಅತಿ ಕಡಿಮೆ ಚಿನ್ನದಲ್ಲಿ ಸೂಕ್ಷ್ಮ ಆಕೃತಿಗಳನ್ನು ತಯಾರಿಸಿ ಎಲ್ಲರ ಗಮನ ಸೆಳೆಯುತ್ತಿರುತ್ತಿರುತ್ತಾರೆ.

ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 2.150 ಗ್ರಾಂ ಚಿನ್ನದೊಂದಿಗೆ ದೆಹಲಿಯಲ್ಲಿನ ಕೆಂಪು ಕೋಟೆ ಮಾದರಿಯನ್ನು ತಯಾರಿಸಿದ್ದಾರೆ. ಒಂದು ಸೆಂಟಿ ಮೀಟರ್ ಎತ್ತರ, 1.5 ಸೆಂಟಿ ಮೀಟರ್ ಅಗಲದ ಈ ಮಾದರಿಯನ್ನು ಐದು ದಿನಗಳ ಕಾಲ ಶ್ರಮಪಟ್ಟು ವಿನ್ಯಾಸಗೊಳಿಸಿದ್ದಾಗಿ ಮುತ್ತುಕುಮಾರನ್ ಹೇಳಿದ್ದಾರೆ.

ಈ ಹಿಂದೆ ವಿಶ್ವಕಪ್, ತಮಿಳುನಾಡು ವಿಧಾನಸಭೆ, ಜಯಲಲಿತಾ, ನಟರಾಜ ದೇವಸ್ಥಾನ, ತಾಜ್ ಮಹಲ್ ಮುಂತಾದವುಗಳ ಮಾದರಿಗಳನ್ನು ಕಡಿಮೆ ಚಿನ್ನ ಬಳಸಿ ಇವರು ತಯಾರಿಸಿದ್ದರು.

Contact for any Electrical Works across Bengaluru

Loading...
error: Content is protected !!