ಹೊಸ ರೆಡ್ಮಿ ನೋಟ್ 4 ವೈಶಿಷ್ಟ್ಯಗಳೇನು? – News Mirchi

ಹೊಸ ರೆಡ್ಮಿ ನೋಟ್ 4 ವೈಶಿಷ್ಟ್ಯಗಳೇನು?

​ರೆಡ್ಮಿ ನೋಟ್-3 ಬಿಡುಗಡೆಯಾಗಿ ಯಶಸ್ವಿಯಾದ ಒಂದು ವರ್ಷದ ನಂತರ ಜಿಯೋಮಿ ಕಂಪನಿ ರೆಡ್ಮಿ ನೋಟ್-4 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ ಭಾರತದಲ್ಲಿ 9,999 ರಿಂದ ಆರಂಭವಾಗುತ್ತದೆ. ಇದರ ಮಾರಾಟ ಫ್ಲಿಪ್ ಕಾರ್ಟ್ ಮತ್ತು mi.com/in ಗಳಲ್ಲಿ ಜನವರಿ 23 ರಿಂದ ಮೂರು ಆಕರ್ಷಕ ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

2ಜಿಬಿ ರ‌್ಯಾಮ್ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೇಜ್ ನ ಸ್ಮಾರ್ಟ್ ಫೋನ್ ನ ಬೆಲೆ ರೂ.9,999 ಆಗಿದ್ದು, 3ಜಿಬಿ ರ‌್ಯಾಮ್ ಮತ್ತು 32 ಜಿಬಿ ಇಂಟರ್ನಲ್ ಮೆಮೋರಿ ಹೊಂದಿರುವ ಸ್ಮಾರ್ಟ್ ಫೋನ್ ಬೆಲೆ ರೂ.10,999. ಇನ್ನು 4ಜಿಬಿ ರ‌್ಯಾಮ್ ಮತ್ತು 64 ಜಿಬಿ ಇಂಟರ್ನಲ್ ಮೆಮೋರಿ ಹೊಂದಿರುವ ಸ್ಮಾರ್ಟ್ ಫೋನ್ ದರವನ್ನು 12,999 ಕ್ಕೆ ನಿಗಧಿಪಡಿಸಲಾಗಿದೆ.

ಆಂಡ್ರಾಯ್ಡ್ ಮಾರ್ಷ್‌ಮಾಲೋ, ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 625, ಹಿಂಬದಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್, 5ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಸ್ಟ್ಯಾಂಡ್ ಬೈ ಮೋಡ್ ನಿಂದ ಅನ್ಲಾಕ್ ಮಾಡಲು ಹಿಂಬದಿ ಕ್ಯಾಮೆರಾ ಬಳಿ ಫಿಂಗರ್ ಪ್ರಿಂಟ್ ಸೆನ್ಸಾರ್, 4100 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ಇತ್ತೀಚೆಗೆ ಬಿಡುಗಡೆಯಾದ ಹಾನರ್ 6X, ಕೂಲ್ ಪ್ಯಾಡ್ ಕೂಲ್1, ಮೋಟೋ ಜಿ4 ಪ್ಲಸ್ ಸ್ಮಾರ್ಟ್ ಫೋನ್ ಗಳಿಗೆ ಸ್ಪರ್ಧೆ ನೀಡಲಿದೆ.

Loading...

Leave a Reply

Your email address will not be published.