ಸೌಂಧರ್ಯ ವರ್ಧಕ, ಕೂದಲು ಕಸಿ ಚಿಕಿತ್ಸಾ ಕೇಂದ್ರಗಳಿಗೆ ನೋಂದಣಿ ಕಡ್ಡಾಯ |News Mirchi

ಸೌಂಧರ್ಯ ವರ್ಧಕ, ಕೂದಲು ಕಸಿ ಚಿಕಿತ್ಸಾ ಕೇಂದ್ರಗಳಿಗೆ ನೋಂದಣಿ ಕಡ್ಡಾಯ

ಬೆಳಗಾವಿ: ಸೌಂದರ್ಯ ವರ್ಧಕ ಮತ್ತು ಕೂದಲು ಕಸಿ ಚಿಕಿತ್ಸೆ ನೀಡುವ ಕೇಂದ್ರಗಳು ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.

ಅನಧಿಕೃತ ವ್ಯಕ್ತಿಗಳಿಂದ ಚಿಕಿತ್ಸೆ ಪಡೆದು ತೊಂದರೆಗೊಳಗಾದವರ ಕುರಿತು ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಸಚಿವರ ಗಮನ ಸೆಳೆದರು. ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿರುವವರ ವಿರುದ್ಧ ದೂರು ನೀಡುವಂತೆ ಹೇಳಿದರು.

ಕೂದಲು ಕಸಿ ಮತ್ತು ಸೌಂಧರ್ಯ ವರ್ಧಕ ಚಿಕಿತ್ಸೆ ನೀಡುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಜೂನ್.17 ರಂದು ಸುತ್ತೋಲೆ ಹೊರಡಿಸಲಾಗಿದೆ. ನೋಂದಣಿಗಾಗಿ ಮಂಗಳೂರಿನಿಂದ ಎರಡು ಮತ್ತು ಬೆಂಗಳೂರಿನಿಂದ 14 ಕ್ಲಿನಿಕ್ ಗಳು ಅರ್ಜಿ ಸಲ್ಲಿಸಿವೆ. ಅವುಗಳಲ್ಲಿ 7 ಅರ್ಜಿಗಳನ್ನು ಪರಿಗಣಿಸಿ ನೋಂದಣಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ಉತ್ತರಿಸಿದರು.

Loading...
loading...
error: Content is protected !!