ಸತ್ತ ಗಂಡನನ್ನು ಮರೆಯಲು ದೇಗುಲಕ್ಕೆ ಹೋದರೆ… – News Mirchi

ಸತ್ತ ಗಂಡನನ್ನು ಮರೆಯಲು ದೇಗುಲಕ್ಕೆ ಹೋದರೆ…

ಸತ್ತಿದ್ದು ತನ್ನ ಗಂಡನೇ ಎಂದುಕೊಂಡು ಅಂತ್ಯಸಂಸ್ಕಾರವನ್ನೂ ಮಾಡಿದ ನಂತರ ಒಂದು ದಿನ ಗಂಡ ಜೀವಂತ ಎದುರಾದರೆ ಹೇಗಿರುತ್ತದೆ…. ಹೌದು ಇಂತಹದ್ದೇ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ರಾಜೇಶ್ವರಿ(54), ಕೃಷ್ಣನ್ ಕುಟ್ಟಿ(55) ದಂಪತಿಗಳ ನಡುವೆ ಯಾವುದೋ ವಿಷಯವಾಗಿ ಜಗಳವಾಗಿ ಮಗಳ ಮದುವೆಗೆ ಇನ್ನು 10 ದಿನಗಳಿರುವಂತೆಯೇ ಕೃಷ್ಣನ್ ಕುಟ್ಟಿ 2013ರಲ್ಲಿ ಊರು ಬಿಟ್ಟು ಹೋಗಿದ್ದರು. ಕೆಲ ತಿಂಗಳ ನಂತರ ಕೊಯಂಬತ್ತೂರು ಪೊಲೀಸರು ಬಂದು ಕೃಷ್ಣ ಚಂದ್ರನ್ ಎಂಬ ವ್ಯಕ್ತಿ ರಸ್ತೆ ಆಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂದು ರಾಜೇಶ್ವರಿಗೆ ಮಾಹಿತಿ ನೀಡಿದರು. ಪೊಲೀಸರು ತಂದ ಫೋಟೋ ಗುರುತು ಹಿಡಿಯಲು ಆಕೆಗೆ ಸಾಧ್ಯವಾಗಲಿಲ್ಲ. ಒಂದು ವಾರದ ನಂತರ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದರು. ಹೀಗಾಗಿ ರಾಜೇಶ್ವರಿ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದರು. ಹೀಗಾಗಿ ಮೃತದೇಹವನ್ನು ತೆಗೆದುಕೊಂಡು ಹೋಗಿ ರಾಜೇಶ್ವರಿ ಮತ್ತು ಸಂಬಂಧಿಕರು ಅಂತ್ಯಕ್ರಿಯೆ ನಡೆಸಿದರು.

ಗಂಡ ಸತ್ತಿದ್ದಾರೆಂದು ತಿಳಿದ ಮೇಲೆ ರಾಜೇಶ್ವರಿ ಮಾನಸಿಕವಾಗಿ ಜರ್ಝರಿತರಾದರು. ಯಾವುದಾದರೂ ದೇವಸ್ಥಾನಕ್ಕೆ ಹೋದರೆ ಮನಸ್ಸಿಗೆ ತುಸು ನೆಮ್ಮದಿ ಸಿಗಬಹುದು ಎಂದು ಯಾರೋ ಸಲಹೆ ನೀಡಿದರು. ಅದರಂತೆ ಆಕೆ ತಮಿಳುನಾಡಿನ ಪಳನಿ ದೇವಾಲಯಕ್ಕೆ ಬಂದರು.

ಪುನಃ ವಾಪಸಾಗುತ್ತಿದ್ದಾಗ ದೇಗುಲದ ಮೆಟ್ಟಿಲುಗಳ ಬಳಿ ಆಕೆಗೆ ಕಾದಿತ್ತು ಆಶ್ಚರ್ಯ. ಅಲ್ಲಿ ಆಕೆ ಗಂಡನೇ ಜೀವಂತವಾಗಿ ಕಾಣಿಸಿದ್ದಾರೆ. ಇದನ್ನು ನೋಡಿದ ಕೂಡಲೇ ಸಂತೋಷದಿಂದ ಕೇಕೆ ಹಾಕಿದ ಆಕೆ ಗಂಡನನ್ನು ಅಪ್ಪಿಕೊಂಡರು. ಇದನ್ನು ನೋಡಿದವರಿಗೆ ವಿಷಯ ಅರ್ಥವಾಗದೆ ಗೊಂದಲಕ್ಕೆ ಬಿದ್ದರು. ಆಗ ನಡೆದಿದ್ದೆಲ್ಲವನ್ನೂ ರಾಜೇಶ್ವರಿ ಅಲ್ಲಿದ್ದವರಿಗೆ ಹೇಳಿದ್ದಾರೆ. ಇದನ್ನ ಕೇಳಿದ ಆಕೆಯ ಗಂಡನಿಗೂ ಶಾಕ್… ನಂತರ ದಂಪತಿಗಳು ದೇವರ ದರ್ಶನ ಮಾಡಿ ಅವರ ಊರಿಗೆ ಹೊರಟರು. ಈಗ ಸತ್ತ ವ್ಯಕ್ತಿಯ ವಿವರಗಳಿಗಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

 

Get Latest updates on WhatsApp. Send ‘Add Me’ to 8550851559

Loading...