ರಿಲಯನ್ಸ್ ಗೆ ಶಾಕ್ ನೀಡಿದ ಕೇಂದ್ರ

ಇದು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಗೆ ದೊಡ್ಡ ಶಾಕ್ ಅಂತಲೇ ಹೇಳಬೇಕು. ದೊಡ್ಡ ಮೊತ್ತದ ಪರಿಹಾರ ಕಟ್ಟುವಂತೆ ಕೇಂದ್ರ ಸರ್ಕಾರ ರಿಲಯನ್ಸ್ ಗೆ ಅದೇಶಿಸಿದೆ. ಒಎನ್‌ಜಿಸಿ – ರಿಲಯನ್ಸ್ ಸಂಸ್ಥೆಗಳಿಗೆ ಸೇರಿದ ಕೆಜಿಡಿ 6 ಬ್ಲಾಕ್ ಕುರಿತು ಕೆಲಕಾಲದಿಂದ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶಗಳಲ್ಲಿ ರಿಲಾಯನ್ಸ್ ಗೆ ಸೇರಿದ ಬಾವಿಗಳ ಪಕ್ಕದಕ್ಲೇ ಇರುವ ಒಎನ್‌ಜಿಸಿ ಬಾವಿಗಳಿಂದ ಅನಿಲವನ್ನು ತೆಗೆದು ಮಾರಿದ್ದಕ್ಕಾಗಿ 1.55 ಬಿಲಿಯನ್ ಡಾಲರ್ ಅಂದರೆ ಸುಮಾರು 10,312 ಕೋಟಿ ರೂಪಾಯಿ ದಂಡ ಕಟ್ಟಬೇಕೆಂದು ಕೇಂದ್ರ ಸರ್ಕಾರ ಆದೇಶ ಜಾರಿ ಮಾಡಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಎಪಿ ಶಾ ಸಮಿತಿ ರಚಿಸಿ ಒಎನ್‌ಜಿಸಿ ಬ್ಲಾಕ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ಗೆ ಅನಿಲ ವರ್ಗಾವಣೆಗೊಂಡ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತ್ತು.

ದಂಡ ಕಟ್ಟುವಂತೆ ನೀಡಿದ ನೋಟೀಸಿಗೆ ಉತ್ತರಿಸಲು ಕಂಪನಿಗೆ ಸರ್ಕಾರ 30 ದಿನಗಳ ಕಾಲಾವಕಾಶ ನೀಡಿದೆ.