ಅಗ್ಗದ ಜಿಯೋ ಫೀಚರ್ ಫೋನ್, ಬೆಲೆ ಎಷ್ಟು ಗೊತ್ತೇ? – News Mirchi

ಅಗ್ಗದ ಜಿಯೋ ಫೀಚರ್ ಫೋನ್, ಬೆಲೆ ಎಷ್ಟು ಗೊತ್ತೇ?

ರಿಲಯನ್ಸ್ ಯಾವ ಉದ್ಯಮಕ್ಕೆ ಕಾಲಿಟ್ಟರೂ ಪ್ರತಿಸ್ಪರ್ಧಿಗಳಿಗೆ ತಲೆನೋವಾಗಿ ಕಾಡುತ್ತದೆ. ಇದೇ ರೀತಿ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಇತರೆ ಟೆಲಿಕಾಂ ಕಂಪನಿಗಳಿಗೆ ನಡುಕ ಹುಟ್ಟಿಸಿದೆ. ಹೀಗಾಗಿ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರು ಜಿಯೋ ಕಡೆ ವಾಲದಂತೆ ತಡೆಯಲು ತಮ್ಮ ಡಾಟಾ ಪ್ಲಾನ್ ಗಳನ್ನು ಬದಲಿಸಿ ಆಕರ್ಷಕ ಕೊಡುಗೆಗಳನ್ನು ಘೋಷಿಸುತ್ತಿವೆ.

ಇದೀಗ ಅತಿ ಕಡಿಮೆ ಬೆಲೆಯಲ್ಲಿ ರಿಲಯನ್ಸ್ ಜಿಯೋ ತನ್ನ ಸ್ವಂತ ಫೀಚರ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಾಗಿ ನಿಂತಿದೆ. ವೋಲ್ಟ್ ಎಲ್‌ಟಿಇ ಸಪೋರ್ಟ್ ಮಾಡುವ ಈ ಜಿಯೋ ಫೀಚರ್ ಫೋನ್ ಗಳಿಂದಾಗಿ ತಮ್ಮ ಮೊಬೈಲ್ ಮಾರಾಟ ಕುಸಿಯಲಿದೆ ಎಂದು ಇತರೆ ಮೊಬೈಲ್ ತಯಾರಿಕಾ ಕಂಪನಿಗಳು ಆತಂಕಗೊಂಡಿವೆ. ಈ ಜಿಯೋ ಫೀಚರ್ ಫೋನ್ ಗೆ ಸಂಬಂಧಿಸಿದ ಚಿತ್ರಗಳು ಈಗ ಹೊರಬಿದ್ದಿವೆ.

ಟಚ್ ಸ್ಕ್ರೀನ್ ಇಲ್ಲದ ಈ ಫೋನ್ ಗಳು ಕೀಪ್ಯಾಡ್ ಹೊಂದಿರುತ್ತವೆ. ಇದರಲ್ಲಿ ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್ ಮತ್ತು ಟಾರ್ಚ್ ಗಾಗಿ ಪ್ರತ್ಯೇಕ ಬಟನ್ ಗಳಿವೆ. ಇನ್ನು ಈ ಮೊಬೈಲ್ ಗಳ ಬೆಲೆ ರೂ.1299 ಇರಬಹುದು ಎನ್ನಲಾಗುತ್ತಿದೆ.

Loading...

Leave a Reply

Your email address will not be published.