ಕಡಿಮೆ ದರದ ಸ್ಮಾರ್ಟ್ ಫೋನ್ ಗಾಗಿ ಒಂದಾದ ಜಿಯೋ ಮತ್ತು ಗೂಗಲ್ – News Mirchi

ಕಡಿಮೆ ದರದ ಸ್ಮಾರ್ಟ್ ಫೋನ್ ಗಾಗಿ ಒಂದಾದ ಜಿಯೋ ಮತ್ತು ಗೂಗಲ್

ಅಗ್ಗದ ದರದಲ್ಲಿ 4ಜಿ ಸ್ಮಾರ್ಟ್ ಫೋನ್ ತಯಾರಿಸಲು ಗೂಗಲ್ ನೊಂದಿಗೆ ರಿಲಯನ್ಸ್ ಜಿಯೋ ಕೈಜೋಡಿಸಿದೆ. ಈಗಾಗಲೇ ಕಡಿಮೆ ದರಗಳಲ್ಲಿ ವಿವಿಧ ಕೊಡುಗೆಗಳನ್ನು ಪ್ರಕಟಿಸಿ ಪ್ರತಿಸ್ಪರ್ಧಿಗಳ ನಿದ್ದೆಗೆಡಿಸಿರುವ ರಿಲಯನ್ಸ್ ಜಿಯೋ, ಇದೀಗ ಕಡಿಮೆ ದರದಲ್ಲಿ 4ಜಿ ಸೌಲಭ್ಯದ ಸ್ಮಾರ್ಟ್ ಫೋನ್ ತಯಾರಿಕೆಗೆ ಮುಂದಾಗಿದೆ.

ಗೂಗಲ್ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಮೇಲೆ ಕೆಲಸ ಮಾಡಲಿರುವ ಈ ಸ್ಮಾರ್ಟ್‌ಫೋನ್, ಈ ವರ್ಷದ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಜಿಯೋ ಸ್ಮಾರ್ಟ್ ಟಿವಿ ಸೇವೆಯಲ್ಲೂ ಜಿಯೋ ಮತ್ತು ಗೂಗಲ್ ಒಂದಾಗಿವೆಯಂತೆ. ಜಿಯೋ ಸ್ಮಾರ್ಟ್ ಟಿವಿ ಸೇವೆಗೆ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಸಾಫ್ಟ್‌ವೇರ್ ಒದಗಿಸುತ್ತದೆ.

Loading...

Leave a Reply

Your email address will not be published.