ಜಿಯೋ ಗ್ರಾಹಕರ ಮಾಹಿತಿ ಸೋರಿಕೆ, ಶಂಕಿತನ ಬಂಧನ

ರಿಲಯನ್ಸ್ ಜಿಯೋ ಗ್ರಾಹಕರ ಮಾಹಿತಿ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಪೊಲೀಸರು ಮಂಗಳವಾರ ವ್ಯಕ್ತಿಯೊಬ್ಬನನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. 35 ವರ್ಷದ ಇಮ್ರಾನ್ ಸಿಂಪಾ(ಅಡ್ಡಹೆಸರು) ಎಂಬುವವನೇ ಬಂಧಿತ ವ್ಯಕ್ತಿ. ತನಿಖೆ ಆರಂಭವಾದ 24 ಗಂಟೆಗಳಲ್ಲಿಯೇ ಶಂಕಿತ ಆರೋಪಿಯ ಬಂಧನವಾಗಿದೆ. ಮತ್ತಷ್ಟು ಸಾಕ್ಷಿ ಸಂಗ್ರಹ ಮತ್ತು ವಿಚಾರಣೆ ಪ್ರಕ್ರಿಯೆ ಮುಂದುವರೆಯುತ್ತಿದೆ ಎಂದು ಸೈಬರ್ ವಿಭಾಗದ ಅಧೀಕ್ಷಕ ಬಲ್ಸಿಂಗ್ ಸಿಂಗ್ ರಜಪೂತ್ ಹೇಳಿದ್ದಾರೆ.

ಆರೋಪಿಯಿಂದ ಕಂಪ್ಯೂಟರ್, ಮೊಬೈಲ್, ಸ್ಟೋರೇಜ್ ಡಿವೈಸ್ ಮುಂತಾದವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಮುಂಬಯಿಗೆ ಕರೆತರಲಾಗುವುದು ಎಂದು ಮಹಾರಾಷ್ಟ್ರ ಸೈಬರ್ ಪೊಲೀಸ್ ಹಿರಿಯ ಅಧಿಕಾರಿ ಬ್ರಿಜೇಶ್ ಸಿಂಗ್ ಹೇಳಿದ್ದಾರೆ. ಸದ್ಯ ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಸೈಬರ್ ಪೊಲೀಸರು ರಿಲಯನ್ಸ್ ಜಿಯೋ ಅಧಿಕಾರಗಳೊಂದಿಗೆ ರಾಜಸ್ಥಾನದಲ್ಲಿ ಇನ್ನೂ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಚೀನಾ ಸರ್ಕಾರಿ ಮಾಧ್ಯಮದಿಂದ ಮೋದಿ ಹೊಗಳಿಕೆ…!

ರಿಲಿಯನ್ಸ್ ಜಿಯೋ ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಸೇರಿದಂತೆ ಆಧಾರ್ ವಿವರಗಳು ಸೋರಿಕೆಯಾಗಿದ್ದವು. ನಂತರ ಸೋರಿಕೆಯಾದ ವೆಬ್ಸೈಟ್ ವಿಳಾಸ ಬ್ಲಾಕ್ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ರಿಲಯನ್ಸ್ ಜಿಯೋ ಸಂಸ್ಥೆ, ಗ್ರಾಹಕರ ಮಾಹಿತಿ ಸುರಕ್ಷಿತವಾಗಿದೆ ಎಂದು ಹೇಳಿತ್ತು.

ಕೊನೆಗೂ ರವಿಶಾಸ್ತ್ರಿ ನೇಮಕ ದೃಢಪಡಿಸಿದ ಬಿಸಿಸಿಐ