ವೊಡಾಫೋನ್ ಬಂಪರ್ ಡಾಟಾ ಆಫರ್ |News Mirchi

ವೊಡಾಫೋನ್ ಬಂಪರ್ ಡಾಟಾ ಆಫರ್

ರಿಲಯನ್ಸ್ ಉಚಿತ ಸೇವೆಗಳ ಹೊಡೆತಕ್ಕೆ ಮತ್ತೊಮ್ಮೆ ಟೆಲಿಕಾಂ ದಿಗ್ಗಜ ಕಂಪನಿಗಳೆಲ್ಲಾ ಕೆಳಗಿಳಿದು ಬರುತ್ತಿವೆ. ಏರ್‌ಟೆಲ್, ಐಡಿಯಾ ನಂತರ ಇದೀಗ ವೊಡಾಫೋನ್ ಕೂಡಾ 4ಜಿ ಪ್ರೀಪೇಯ್ಡ್ ಗ್ರಾಹಕರಿಗೆ ಮಂಗಳವಾರ ಬಂಪರ್ ಕೊಡುಗೆ ಪ್ರಕಟಿಸಿದೆ. ಇನ್ನು ಮುಂದೆ ರೂ.150 ಕ್ಕೇ 1 ಜಿಬಿ ಡಾಟಾ ನೀಡುವುದಾಗಿ ಪ್ರಕಟಿಸಿದೆ. ಅದೇ ರೀತಿ ರೂ.1,500 ಡಾಟಾ ಪ್ಯಾಕ್ ಗೆ ತಿಂಗಳಿಗೆ 35 ಜಿಬಿ ಡಾಟಾ ನೀಡಲಿದೆ.

ಆದರೆ ಹೊಸ ಡಾಟಾ ಪ್ಯಾಕ್ ಗಳ ದರಗಳು ವಿವಿಧ ಸರ್ಕಲ್ ಗಳಲ್ಲಿ ಬೇರೆ ಬೇರೆಯಾಗಿರುತ್ತದೆ ಎಂದು ಕಂಪನಿ ಹೇಳಿದೆ. ವೊಡಾಫೋನ್ 4ಜಿ ಸರ್ಕಲ್ ಗಳಲ್ಲಿ ಮಾತ್ರ ಈ ಕೊಡುಗೆಗಳು ಲಭ್ಯವಾಗಲಿವೆ.ಇದುವರೆಗೂ‌1 ಜಿಬಿ, 10 ಜಿಬಿ 4ಜಿ ಡಾಟಾ ಪ್ಯಾಕ್ ಖರೀದಿಸುತ್ತಿದ್ದ ಗ್ರಾಹಕರು, ಇದೀಗ ಅದೇ ದರಕ್ಕೆ 4ಜಿಬಿ, 22 ಜಿಬಿ ಪಡೆಯಬಹುದು ಎಂದು ಹೇಳಿದೆ.

ಹೊಸ ವೊಡಾಫೋನ್ 4G ಡಾಟಾ ಪ್ಯಾಕ್ …
1 ಜಿಬಿ ಡೇಟಾ ಪ್ಯಾಕ್ – ರೂ 150
4 ಜಿಬಿ ಡೇಟಾ ಪ್ಯಾಕ್ – ರೂ 250
6 ಜಿಬಿ ಡೇಟಾ ಪ್ಯಾಕ್ – ರೂ 350
ಡೇಟಾ ಪ್ಯಾಕ್ 9 ಜಿಬಿ – ರೂ 450
13 ಜಿಬಿ ಡೇಟಾ ಪ್ಯಾಕ್ – ರೂ 650
22 ಜಿಬಿ ಡೇಟಾ ಪ್ಯಾಕ್- ರೂ 990
35 ಜಿಬಿ ಡೇಟಾ ಪ್ಯಾಕ್ – ರೂ 1,500

Vodafone has announced as much as four times more data for prepaid Vodafone Supernet 4G customers, however, the prices of data packs would vary from circle to circle.

Loading...
loading...
error: Content is protected !!