ಇದೇ ದೀಪಾವಳಿಗೆ “ಜಿಯೋ ಫೈಬರ್” ಬ್ರಾಡ್ ಬ್ಯಾಂಡ್ – News Mirchi

ಇದೇ ದೀಪಾವಳಿಗೆ “ಜಿಯೋ ಫೈಬರ್” ಬ್ರಾಡ್ ಬ್ಯಾಂಡ್

ಕಳೆದ ವರ್ಷ ಪ್ರಾಯೋಗಿಕವಾಗಿ ಮಹತ್ವಾಕಾಂಕ್ಷೆಯ “ಜಿಯೋ ಫೈಬರ್” ಬ್ರಾಡ್ ಬ್ಯಾಂಡ್ ಸೇವೆಯನ್ನು ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ, ದೀಪಾವಳಿಗೆ ಈ ಸೇವೆಯನ್ನು ವಾಣಿಜ್ಯವಾಗಿ ಆರಂಭಿಸಲು ಸಿದ್ಧವಾಗಿದೆ. ಹೀಗೆಂದು ರಿಲಯನ್ಸ್ ಜಿಯೋ ಕಂಪನಿಯ ಬೋರ್ಡ್ ನಿರ್ದೇಶಕಿಯಾಗಿರುವ ಇಶಾ ಅಂಬಾನಿ ಅವರು ಟ್ವಿಟರ್ ಮೂಲಕ ಪ್ರಕಟಿಸಿದ್ದಾರೆ.

ನೀವು ನಿರೀಕ್ಷಿಸಿದಂತೆ ಕಡಿಮೆ ದರಗಳಲ್ಲಿ ಜಿಯೋ ಬ್ರಾಡ್ ಬ್ಯಾಂಡ್ ಸೇವೆಯು ಕಡಿಮೆ ಶುಲ್ಕಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಹೇಳಿರುವ ಇಶಾ ಅಂಬಾನಿ, 500 ರೂಪಾಯಿಗೆ 100 ಜಿಬಿ ಡಾಟಾವನ್ನು 1 ಜಿಬಿಪಿಎಸ್ ವೇಗದಲ್ಲಿ ಪಡೆಯಬಹುದು ಎಂದು ಹೇಳಿದ್ದಾರೆ. ಈ ಸೇವೆ ಭಾರತದಾದ್ಯಂತ 100 ನಗರಗಳಲ್ಲಿ ಇದೇ ದೀಪಾವಳಿ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

[ವೈವಾಹಿಕ ಅತ್ಯಾಚಾರ ಶಿಕ್ಷಾರ್ಹ ಅಪರಾಧವಲ್ಲ : ಸುಪ್ರೀಂ ಕೋರ್ಟ್]

500 ರೂಪಾಯಿಯ ಪ್ಲಾನ್ ನೊಂದಿಗೆ ಹೆಚ್ಚಿನ ಶುಲ್ಕದ ಪ್ಲಾನ್ ಗಳೂ ಲಭ್ಯವಿದ್ದು, ತಿಂಗಳಿಗೆ ರೂ.2000 ಪಾವತಿ ಮಾಡುವ ಮೂಲಕ 1000 ಜಿಬಿ ಡಾಟಾ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಜಿಯೋ ಫೈಬರ್ ಸೇವೆಗಳು ಜಿಯೋ ಮೀಡಿಯಾ ಶೇರ್ ಡಿವೈಸ್ ನೊಂದಿಗೆ ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್, ರೂಟರ್ ಮತ್ತು ಪವರ್ ಲೈನ್ ಕಮ್ಯೂನಿಕೇಷನ್(ಪಿಎಲ್ಸಿ) ಪ್ಲಗ್ ಗಳನ್ನು ಹೊಂದಿರುತ್ತವೆ.

ಕಳೆದ ವರ್ಷ ಜಿಯೋ ಫೈಬರ್ ಸೇವೆ ಯಾವ ನಗರಗಳಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾಗಬಹುದು ಎಂಬ ಮಾಹಿತಿ ಸೋರಿಕೆಯಾಗಿತ್ತು. ಸೋರಿಕೆಯಾದ ಮಾಹಿತಿಯ ಪ್ರಕಾರ ದೆಹಲಿ, ಅಹಮದಾಬಾದ್, ಹೈದರಾಬಾದ್, ಜೈಪುರ, ಕೋಲ್ಕತಾ, ಮುಂಬೈ, ಸೂರತ್, ವಡೋದರಾ ಮತ್ತು ವಿಶಾಖಪಟ್ಟಣಗಳಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.

ಲಾಲೂ ನೀವೊಬ್ಬರೇ ಬಿಜೆಪಿ ಎದುರಿಸಲಾಗದು, ನಾನೂ ಬರ್ತೀನಿ: ಓವೈಸಿ

Loading...