ನಂಬರ್ ಬದಲಿಸದೆ ಜಿಯೋ ಗೆ ಬದಲಾಗಿ, ಪಡೆಯಿರಿ ಉಚಿತ 4ಜಿ ಸೇವೆ

ರಿಲಯನ್ಸ್ ಜಿಯೋ ಅನ್ಲಿಮಿಟೆಡ್ ಪ್ಲಾನ್ ಕುರಿತು ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಆದ್ದರಿಂದಲೇ ಜಿಯೋ ಸ್ಟೋರ್ ಗಳ ಎದುರು ಜನ ಉದ್ದದ ಸಾಲುಗಳಲ್ಲಿ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ. ಹೆಚ್ಚು ಹೆಚ್ಚು ಜನರು ಜಿಯೋ ಕಡೆ ಆಕರ್ಷಿತರಾಗುತ್ತಿರುವುದರಿಂದ ಉಚಿತ ಜಿಯೋ ಸೇವೆ ನೀಡುವ ಪ್ರಕ್ರಿಯೆಯಲ್ಲಿ ತಡವಾಗುತ್ತಿದೆ. ಹೀಗಾಗಿ ಜನ ಜಿಯೋ ಸಂಪರ್ಕ ಪಡೆಯಲು ಸುಲಭ ಮಾರ್ಗಗಳತ್ತ ನೋಡುತ್ತಿದ್ದಾರೆ. ಹಲವರು ತಮ್ಮ ಮೊಬೈಲ್ ಸಂಖ್ಯೆಯನ್ನು ರಿಲಯನ್ಸ್ ಜಿಯೋಗೆ ಪೋರ್ಟ್ ಮಾಡಲು ಮುಂದಾಗುತ್ತಿದ್ದಾರೆ.

ನಿಮ್ಮ ಈಗಿನ ಮೊಬೈಲ್ ಸಂಖ್ಯೆಯನ್ನು ಜಿಯೋಗೆ ಪೋರ್ಟ್ ಮಾಡುವುದು ಹೇಗೆ ಎಂದು ಕೆಳಗಿನ ಸಲಹೆ ಓದಿ ತಿಳಿಯಿರಿ…

ಮೊದಲು ನೀವು ಮಾಡಬೇಕಿರುವುದು ನಿಮ್ಮ ಈಗಿನ ಮೊಬೈಲ್ ಸಂಖ್ಯೆಯಿಂದ PORT ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಮೊಬೈಲ್ ಸಂಖ್ಯೆ ಟೈಪ್ ಮಾಡಿ (ಉದಾ: PORT 9898989898 ) 1900 ಸಂಖ್ಯೆಗೆ ಮೆಸೇಜ್ ಕಳುಹಿಸಿ.

ಇದಾದ ನಂತರ “Unique Porting Code” ಒಳಗೊಂಡ ಒಂದು ಮೆಸೇಜ್ ನೀವು ಪಡೆಯುವಿರಿ. ಆ ಕೋಡ್ ನ ವ್ಯಾಲಿಡಿಟಿ ದಿನಾಂಕ ಮುಗಿಯುವದರೊಳಗೆ ನೀವು ಜಿಯೋ ಸ್ಟೋರ್ ನಲ್ಲಿ ಪೋರ್ಟಿಬಿಲಿಟಿಗೆ ಮನವಿ ಮಾಡುವ ಸಂದರ್ಭದಲ್ಲಿ ಅರ್ಜಿಯಲ್ಲಿ ತುಂಬಬೇಕಾಗುತ್ತದೆ.

ಈಗ ಹತ್ತಿರದ ಜಿಯೋ ಸ್ಟೋರ್ ಗೆ ಭೇಟಿ ನೀಡಿ, ಚಂದಾದಾರರ ನೋಂದಣಿ ಫಾರ್ಮ್ (Subscriber Enrollment form) ಭರ್ತಿ ಮಾಡಬೇಕಿರುತ್ತದೆ. ಅಪ್ಲಿಕೇಷನ್ ಫಾರ್ಮ್ ಜೊತೆಗೆ ನಿಮ್ಮ ಐಡಿ, ವಿಳಾಸ ಪುರಾವೆ ಮತ್ತು ಪಾಸ್ಪೋರ್ಟ್ ಅಳತೆಯ ಭಾವಚಿತ್ರವೊಂದನ್ನು ನೀಡಬೇಕಿರುತ್ತದೆ.

ಇಷ್ಟು ಮಾಡಿದಾಗ ನಿಮಗೆ ಜಿಯೋ ಸ್ಟೋರ್ ನಲ್ಲಿ ಜಿಯೋ ಸಿಮ್ ನೀಡುತ್ತಾರೆ. ಈಗ ಜಿಯೋ ಕಡೆಯಿಂದ ನಿಮ್ಮ ಹಳೆಯ ಆಪರೇಟರ್ ಜೊತೆ ಸಂಪರ್ಕಿಸಿ ನಂಬರ್ ಪೋರ್ಟ್ ಮಾಡಲು ಅನುಮತಿ ಪಡೆಯುತ್ತಾರೆ.

ಹಳೆಯ ಅಪರೇಟರ್ ಕಡೆಯಿಂದ ಅನುಮತಿ ಸಿಕ್ಕ ನಂತರ ನಿಮ್ಮ ನಂಬರ್ ಜಿಯೋಗೆ ಬದಲಾಗುವ ಪ್ರಕ್ರಿಯೆ ಶುರುವಾಗುತ್ತದೆ. ಒಂದು ನಿರ್ಧಿಷ್ಟ ದಿನಾಂಕದಂದು ಹಳೆಯ ಆಪರೇಟರ್ ಸಂಪರ್ಕ ಕಡಿತಗೊಳಿಸಿ ಜಿಯೋ ಆಪರೇಟರ್ ಗೆ ಮಾಹಿತಿ ನೀಡುತ್ತಾರೆ.

ಈಗ ಜಿಯೋ ಆಪರೇಟರ್ ನಿಮ್ಮ ಮೊಬೈಲ್ ಸಂಖ್ಯೆಗೆ ಸಂಪರ್ಕ ಕಲ್ಪಿಸುತ್ತಾರೆ. ಈ ಒಟ್ಟಾರೆ ಪ್ರಕ್ರಿಯೆ ನಾಲ್ಕು ದಿನಗಳು ತೆಗೆದುಕೊಳ್ಳಲಿದೆ. ಹಳೇ ಆಪರೇಟರ್ ಕಡೆಯಿಂದ ಸಂಪರ್ಕ ಕಡಿತಗೊಂಡ ಬಗ್ಗೆ ಮೆಸೇಜ್ ಬಂದ ನಂತರ ನಿಮಗೆ ಕೊಟ್ಟ ಹೊಸ ಜಿಯೋ ಸಿಮ್ ಮೊಬೈಲಿಗೆ ಹಾಕಬಹುದು. ನಿಮ್ಮ ನಂಬರ್ ಪೋರ್ಟ್ ಆದ ನಂತರ ಯಾವುದೇ ಸಮಸ್ಯೆಯಿಲ್ಲದೆ, ನಂಬರ್ ಬದಲಾಯಿಸದೆ ಜಿಯೋ 4ಜಿ ಸೇವೆ ಪಡೆಯುತ್ತೀರಿ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache