Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ವೇಗದಲ್ಲಿ ಜಿಯೋ ನಂ.1 – News Mirchi

ವೇಗದಲ್ಲಿ ಜಿಯೋ ನಂ.1

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಸುನಾಮಿಯಾಗಿ ಬಂದ ರಿಲಯನ್ಸ್ ಜಿಯೋಗಿಂತ ತಮ್ಮ ನೆಟ್ವರ್ಕ್ ಉತ್ತಮ ಎಂದು ಬಿಂಬಿಸಿಕೊಳ್ಳಲು ಏರ್ಟೆಲ್ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಜಿಯೋ ನೀಡುತ್ತಿರುವ ಸ್ಪೀಡ್ ಗಿಂತ ತಮ್ಮ ನೆಟ್ವರ್ಕ್ ಸ್ಪೀಡ್ ಹೆಚ್ಚು ಎಂದು ಅಂತರಾಷ್ಟ್ರೀಯ ಸಂಸ್ಥೆಯಿಂದಲೂ ಹೇಳಿಸಿತ್ತು. ಜಾಹೀರಾತು ಮೂಲಕವೂ ಅತಿ ವೇಗದ ಇಂಟರ್ನೆಟ್ ನಮ್ಮದೇ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿತ್ತು.

ಆದರೆ ಇದೀಗ, ಇತರೆ ನೆಟ್ವರ್ಕ್ ಗಳಿಗೆ ಹೋಲಿಸಿದರೆ ಜಿಯೋ ನೆಟ್ವರ್ಕ್ ವೇಗ ಹೆಚ್ಚು ಎಂದು ಟೆಲಿಫೋನ್ ಅಥಾರಿಟಿ ಆಪ್ ಇಂಡಿಯಾ(ಟ್ರಾಯ್) ಡಾಟಾ ವೇಗದ ವರದಿಯನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ವೊಡಾಫೋನ್, ಏರ್ಟೆಲ್, ಐಡಿಯಾ ಮುಂತಾದ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ರಿಲಯನ್ಸ್ ಜಿಯೋ ಅತಿ ಹೆಚ್ಚು ಡೌನ್ಲೋಡ್ ವೇಗವನ್ನು ದಾಖಲಿಸಿದೆ ಎಂದು ಟ್ರಾಯ್ ಬಿಡುಗಡೆ ಮಾಡಿದ ವರದಿಯಲ್ಲಿ ಬಯಲಾಗಿದೆ. ಫೆಬ್ರವರಿ ತಿಂಗಳ ಮಾಸಿಕ ಸರಾಸರಿ ಡಾಟಾ ವೇಗ ವರದಿಯನ್ನು ಬಹಿರಂಗಪಡಿಸಿದ್ದು, ರಿಲಯನ್ಸ್ ಜಿಯೋ ವೇಗ 16.48 Mbps ಇದೆ ಎಂದು ಹೇಳಿದೆ. ಐಡಿಯಾ 12.09 Mbps, ಏರ್ಟೆಲ್ 10.43 ಮತ್ತು ವೊಡಾಫೋನ್ 7.43 Mbps ನೊಂದಿಗೆ ನಂತರದ ಸ್ಥಾನಗಳಲ್ಲಿವೆ.

ದೇಶಾದ್ಯಂತ ಮೊಬೈಲ್ ಬಳಕೆದಾರರಿಂದ ಮೈಸ್ಪೀಡ್ ಆಪ್ ಮೂಲಕ ಇಂಟರ್ನೆಟ್ ವೇಗದ ಮಾಹಿತಿಯನ್ನು ಟ್ರಾಯ್ ಸಂಗ್ರಹಿಸುತ್ತದೆ.

Contact for any Electrical Works across Bengaluru

Loading...
error: Content is protected !!