ಜಿಯೋ ಪ್ರಕಟಿಸಿದ ಹೊಸ ಆಫರ್ ಗಳು – News Mirchi

ಜಿಯೋ ಪ್ರಕಟಿಸಿದ ಹೊಸ ಆಫರ್ ಗಳು

ಧನ್ ಧನಾ ಧನ್ ಆಫರ್, ಸಮ್ಮರ್ ಸರ್ಪ್ರೈಸ್ ಆಫರ್ ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಮುಂದೇನು ಅನ್ನುತ್ತಿದ್ದವರಿಗೆ ಈಗ ರಿಲಯನ್ಸ್ ಜಿಯೋ ತನ್ನ ಪ್ಲಾನ್ ಗಳನ್ನು ಮಾರ್ಪಾಡು ಮಾಡಿದೆ. ರೂ.399, ರೂ.349 ಪ್ರೀಪೇಯ್ಡ್ ಪ್ಲಾನ್ ಗಳನ್ನು ತಂದಿದೆ. ಈ ಪ್ಲಾನ್ ಗಳಲ್ಲಿ ರೂ.349 ರೀಚಾರ್ಜ್ ಮಾಡಿದರೆ 20 ಜಿಬಿ 4ಜಿ ಡಾಟಾವನ್ನು 56 ದಿನಗಳ ವ್ಯಾಲಿಡಿಯೊಂದಿಗೆ ಬಳಸಿಕೊಳ್ಳಬಹುದು. ಆದರೆ ಪ್ರತಿದಿನ ಇಷ್ಟೇ ಡಾಟಾ ಬಳಸಬೇಕು ಎಂಬ ಮಿತಿಯೇನಿಲ್ಲ. ಹಾಗಾಗಿ 20 ಜಿಬಿ ಮುಗಿಯುತ್ತಿದ್ದಂತೆ ಇಂಟರ್ನೆಟ್ ವೇಗ 128 ಕೆಬಿಪಿಎಸ್ ಇಳಿಯುತ್ತದೆ.

ಮತ್ತೊಂದು ಪ್ಲಾನ್ ರೂ.399. ಇದರಲ್ಲಿ ಮೂರು ತಿಂಗಳ ಕಾಲ ಅನಿಯಮಿತ ಸೇವೆಗಳನ್ನು ಬಳಸಿಕೊಳ್ಳಬಹುದು. ಈ ಪ್ಲಾನ್ ಈ ಹಿಂದೆ ಬಳಸುತ್ತಿದ್ದ ಧನ್ ಧನಾ ಧನ್ ಆಫರ್ ರೂ.309 ಪ್ಲಾನ್ ನಂತೆಯೇ ಇರುತ್ತದೆ. ಪ್ರತಿದಿನ 1 ಜಿಬಿ ಡಾಟಾ ಮಾತ್ರ ಬಳಸಬಹುದು.  ಈಗ ಅದಕ್ಕೆ ರೂ.399 ಪಾವತಿಸಿ 84 ದಿನಗಳ ವ್ಯಾಲಿಡಿಟಿ ಪಡೆಯಬಹುದು. ಉಳಿದಂತೆ ಈ ಹಿಂದೆ ಇದ್ದ ಇತರೆ ಯಾವುದೇ ಪ್ರೀಪೇಯ್ಡ್ ಪ್ಲಾನ್ ಗಳಲ್ಲಿ ಯಾವುದೇ ಬದಲಾವಣೆಯಿಲ್ಲ.

ಮುಖೇಶ್ ಅಂಬಾನಿ ನಿವಾಸದಲ್ಲಿ ಬೆಂಕಿ

ಪ್ರಸ್ತುತ ಇರುವ ರೂ.309, ರೂ.509 ಪ್ಲಾನ್ ಗಳು ಕೂಡಾ ಎರಡು ತಿಂಗಳ ವ್ಯಾಲಿಡಿಟಿ ಹೊಂದಿವೆ. ರೂ.309 ಪ್ಲಾನ್ ನಲ್ಲಿ 60 ಜಿಬಿ ಡಾಟಾ, ರೂ.509 ಪ್ಲಾನ್ ನಲ್ಲಿ 128 ಜಿಬಿ ಜಿಯೋ ನೀಡುತ್ತಿದೆ. ಯಾರು ಈ ಪ್ಲಾನ್ ಗಳನ್ನು ಮುಂದುವರೆಸಲು ಬಯಸುತ್ತಾರೋ ಅವರು ಈ ಹೊಸ ಪ್ಲಾನ್ ಗಳನ್ನು ಉಪಯೋಗಿಸಿಕೊಳ್ಳಬಹುದು. ಈ ಹಿಂದಿನ ರೂ.149 ಪ್ಲಾನ್ ನಲ್ಲಿಯೂ ಯಾವುದೇ ಬದಲಾವಣೆಯಿಲ್ಲ. ಹೊಸ ಗ್ರಾಹಕರು ರೂ.99 ಪಾವತಿಸಿ ಜಿಯೋ ಪ್ರೈಮ್ ಗ್ರಾಹಕರಾಗಬಹುದು ಎಂದು ಜಿಯೋ ಪ್ರಕಟಣೆ ತಿಳಿಸಿದೆ.

ಚೀನಾ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತೀಯ ಸೇನೆ

Loading...