ಜಿಯೋ “ಸಮ್ಮರ್ ಸರ್ಪ್ರೈಸ್” ಮುಗಿಯಲಿದೆ, ಮುಂದೇನು…? – News Mirchi
We are updating the website...

ಜಿಯೋ “ಸಮ್ಮರ್ ಸರ್ಪ್ರೈಸ್” ಮುಗಿಯಲಿದೆ, ಮುಂದೇನು…?

ರಿಲಯನ್ಸ್ ಜಿಯೋ ಗ್ರಾಹಕರ ಸಮ್ಮರ್ ಸರ್ಪ್ರೈಸ್ ಕೊಡುಗೆಯ ಅವಧಿ ಮುಗಿಯುತ್ತಾ ಬಂದಿದೆ. ನೀವು ಈ ಆಫರ್ ಪಡೆದವರಾಗಿದ್ದರೆ, ಇನ್ನು ಜಿಯೋ ಸೇವೆಗಳಲ್ಲಿ ಮುಂದುವರೆಯಲು ಮತ್ತೆ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಜಿಯೋ ಸಮ್ಮರ್ ಸರ್ಪ್ರೈಸ್ ಕೊಡುಗೆ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್ 31 ರವರೆಗೂ ಜಿಯೋ ಉಚಿತ ಸೇವೆಗಳನ್ನು ನೀಡಿತ್ತು.

ರೂ.99 ಪಾವತಿಸಿ ಪ್ರೈಮ್ ಸದಸ್ಯರಾಗಿ ರೂ.303 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ರೀಚಾರ್ಜ್ ಮಾಡಿಕೊಂಡವರಿಗೆ ಸಮ್ಮರ್ ಸರ್ಪ್ರೈಸ್ ಕೊಡುಗೆಯು ಮೂರು ತಿಂಗಳ ಉಚಿತ ಡಾಟಾ ಮತ್ತು ವಾಯ್ಸ್ ಕರೆಗಳನ್ನು ನೀಡಿತ್ತು. ಆದರೆ ಟ್ರಾಯ್ ನಿರ್ದೇಶನದಂತೆ ಆ ಕೊಡುಗೆಯನ್ನು ನಿಲ್ಲಿಸಬೇಕಾಗಿ ಬಂದಿತ್ತು. ಆದರೂ ಅದೇ ಕೊಡುಗೆಯನ್ನು “ಧನ್ ಧನಾ ಧನ್” ಹೆಸರಿನಲ್ಲಿ ಜಿಯೋ ಮುಂದುವರೆಸಿತ್ತು.

ಇದೀಗ ರಿಲಯನ್ಸ್ ಸಮ್ಮರ್ ಸರ್ಪ್ರೈಸ್ ಕೊಡುಗೆ ಇದೇ ಜುಲೈನಲ್ಲಿ ಮುಗಿಯಲಿದ್ದು, ಅದು ಗ್ರಾಹಕರು ರೂ.303 ರೀಚಾರ್ಜ್ ಮಾಡಿದ ದಿನಾಂಕವನ್ನು ಆಧರಿಸಿದೆ. ನೀವು ಒಂದು ವೇಳೆ ಏಪ್ರಿಲ್ ನಲ್ಲಿ ರೂ.303 ರೀಚಾರ್ಜ್ ಮಾಡಿದ್ದರೆ, ಅದರ ಅವಧಿ ಜುಲೈ 20 ರಂದು ಮುಗಿಯಲಿದೆ. ಅದಕ್ಕಿಂತಲೂ ಮುಂಚೆಯೇ ರೀಚಾರ್ಜ್ ಮಾಡಿಸಿದ್ದೇ ಆದಲ್ಲಿ ಕೊಡುಗೆ ಮುಗಿಯುವ ಅವಧಿಯಲ್ಲಿ ಸ್ವಲ್ಪ ಹಿಂದುಮುಂದಾಗಬಹುದು.

ಕೊಡುಗೆಯ ಅವಧಿ ಮುಗಿದರ ನಂತರ, ಪ್ರತಿ ತಿಂಗಳು ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಜಿಯೋ ಸೇವೆಗಳನ್ನು ಪಡೆಯಬಹುದು. ಅಂದರೆ ರೂ.309 ರೀಚಾರ್ಜ್ ಮಾಡಿಸುವ ಮೂಲಕ ಪ್ರತಿ ದಿನ 1 ಜಿಬಿ ಡಾಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬಳಸಬಹುದು. ಧನ್ ಧನಾ ಧನ್ ಕೊಡುಗೆಯಲ್ಲಿದ್ದಂತೆ 84 ದಿನಗಳ ವ್ಯಾಲಿಡಿಟಿ ಹೊಂದಿರುವುದಿಲ್ಲ.

ನಿಮ್ಮ ಸಿಮ್ ನ ಸಮ್ಮರ್ ಸರ್ಪ್ರೈಸ್ ಆಫರ್ ಎಂದು ಕೊನೆಯಾಗಲಿದೆ ಎಂಬುದರ ಬಗ್ಗೆ ಗೊಂದಲವಿದ್ದರೆ, ಮೈ ಜಿಯೋ ಆಪ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ. ನಿಮ್ಮ ಮೊಬೈಲ್ ಸಂಖ್ಯೆಯ ಆಫರ್ ವ್ಯಾಲಿಡಿಟಿ ಎಂದು ಕೊನೆಯಾಗುತ್ತದೆ ಎಂಬುದನ್ನು ತಿಳಿಯಿರಿ.

Contact for any Electrical Works across Bengaluru

Loading...
error: Content is protected !!