ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ

ಆಫರ್ ವಾರ್ ನಲ್ಲಿ ರಿಲಯನ್ಸ್ ಗೆ ಗೆಲುವು ಸಿಕ್ಕಿದೆ. ಉಚಿತ ಆಫರ್ ಕುರಿತು ಇತರೆ ಟೆಲಿಕಾಂ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ, ಟೆಲಿಕಾಂ ರೆಗ್ಯುಲೇಟರಿ ಟ್ರಾಯ್ ರಿಲಯನ್ಸ್ ಜಿಯೋಗೆ ಕ್ಲೀನ್ ಚಿಟ್ ನೀಡಿದೆ. ರಿಲಯನ್ಸ್ ಜಿಯೋ ಪ್ರಕಟಿಸಿದ ಉಚಿತ ಕೊಡುಗೆ ಹೆಚ್ಚು ಕಾಲ ಕೊಡಲು ಸರಿಯಲ್ಲ ಎಂದು ಭಾರ್ತಿ ಏರ್ಟೆಲ್, ಐಡಿಯಾ ಸೆಲ್ಯುಲಾರ್ ಕಂಪನಿಗಳು ವಾದಿಸಿದ್ದವು.

ರಿಲಯನ್ಸ್ ಜಿಯೋ ಘೋಷಿಸಿದ ವೆಲ್ಕಮ್ ಆಫರ್ ಮತ್ತು ನ್ಯೂ ಇಯರ್ ಆಫರ್ ಎರಡೂ ಬೇರೆ ಬೇರೆ ಕೊಡುಗೆಗಳು ಎಂದು ಟ್ರಾಯ್ ಸ್ಪಷ್ಟವಾಗಿ ಹೇಳಿದೆ. ರಿಲಯನ್ಸ್ ಘೊಷಿಸಿದ ಕೊಡುಗೆಗಳಲ್ಲಿ ಯಾವುದೇ ಲೋಪದೋಷಗಳಿಲ್ಲ ಎಂದು ಟ್ರಾಯ್ ಹೇಳಿದೆ. ರಿಲಯನ್ಸ್ ಘೋಷಿಸಿರುವ ಎರಡು ಉಚಿತ ಕೊಡುಗೆಗಳು ಸರಿಯಲ್ಲ, ಇವುಗಳನ್ನು ರದ್ದು ಮಾಡಬೇಕು ಎಂದು ಭಾರ್ತಿ ಏರ್ಟೆಲ್ ನ ಚೇರ್ಮನ್ ಸುನಿಲ್ ಮಿತ್ತಲ್ ಒತ್ತಾಯಿಸಿ ಟೆಲಿಕಾಂ ಟ್ರಿಬ್ಯುನಲ್ ಮೊರೆ ಹೋಗಿದ್ದರು.

ಇದೀಗ ಟ್ರಾಯ್ ರಿಲಯನ್ಸ್ ಜಿಯೋ ಗೆ ಕ್ಲೀನ್ ಚಿಟ್ ನೀಡಿದ್ದರಿಂದ, ಯಾವುದೇ ಗೊಂದಲವಿಲ್ಲದೆ ಜಿಯೊ ಗ್ರಾಹಕರು ಮಾರ್ಚ್ 1 ರವರೆಗೂ ಈಗಾಗಲೇ ಘೋಷಿಸಿರುವ ಉಚಿತ ಡಾಟಾ ವಾಯ್ಸ್ ಸೇವೆಗಳನ್ನು ಅನುಭವಿಸಬಹುದಾಗಿದೆ.