ರಿಲಯನ್ಸ್ ಲೈಫ್ ಮೊಬೈಲ್ ಗಳ ಮೇಲೆ ಭಾರೀ ದರ ಕಡಿತ |News Mirchi

ರಿಲಯನ್ಸ್ ಲೈಫ್ ಮೊಬೈಲ್ ಗಳ ಮೇಲೆ ಭಾರೀ ದರ ಕಡಿತ

ರಿಲಯನ್ಸ್ ಲೈಫ್ ಸರಣಿಯ 4ಜಿ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಕಡಿತ ಮಾಡುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ರಿಲಯನ್ಸ್ ತನ್ನ ಡೀಲರ್ ಗಳಿಗೆ ಈ ಕುರಿತು ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

ಲೀಕ್ ಆದ ಮಾಹಿತಿಗಳ ಪ್ರಕಾರ, ಜುಲೈ 5 ರಿಂದ ಈ ದರ ಕಡಿತ ಜಾರಿಗೆ ಬರಲಿದೆ. ರೂ. 13,499 ಮೌಲ್ಯದ ರಿಲಯನ್ಸ್ ಲೈಫ್ ವಾಟರ್-2 ಬೆಲೆ ದರ ಕಡಿತದ ನಂತರ ರೂ. 9,499 ಕ್ಕೆ ಸಿಗಲಿದೆ. ಅಂದರೆ ರೂ. 4,000 ರೂಪಾಯಿ ಗ್ರಾಹಕರಿಗೆ ಲಾಭವಾಗಲಿದೆ. ಹಾಗೆಯೇ ಲೈಫ್ ವಿಂಡ್ ಮೊಬೈಲ್ ಮೇಲೆ ರೂ.500 ಕಡಿತವಾಗಲಿದ್ದು, ರೂ. 5,9999 ಕ್ಕೆ ಮಾರಾಟವಾಗಲಿದೆ.

4,799 ಮೌಲ್ಯದ ಲೈಫ್ ಫ್ಲೇಮ್-2 ರೂ.3,499 ಗೆ ಇಳಿಯಲಿದ್ದು, ಲೈಪ್ ಫ್ಲೇಮ್-4, 5 ಮತ್ತು 6 ರೂ.2,999 ಕ್ಕೇ ಸಿಗಲಿದೆ. ಲೈಫ್ ಫೋನ್ ಖರೀದಿ ಮಾಡುವ ಗ್ರಾಹಕರು 3 ತಿಂಗಳುಗಳ ಕಾಲ ಉಚಿತ 4ಜಿ ವಾಯ್ಸ್ ಮತ್ತು 3 ತಿಂಗಳು ಉಚಿತ 3ಜಿ ವಾಯ್ಸ್ ಕರೆಗಳ ಸೌಲಭ್ಯ ಪಡೆಯಲಿದ್ದಾರೆ.

Loading...
loading...
error: Content is protected !!