ಸ್ಪೋಟಗೊಂಡ ರಿಲಯನ್ಸ್ ಲೈಫ್ ಫೋನ್

ಇತ್ತೀಚೆಗೆ ಸ್ಮಾರ್ಟ್ ಫೋನ್ ಸ್ಪೋಟ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿಯವರೆಗೂ ಸ್ಯಾಮ್‌ಸಂಗ್ ನೋಟ್ 7 ಫೋನ್, ಆಪಲ್ ಫೋನ್ ಗಳ ಸ್ಪೋಟಗಳ ಸುದ್ದಿ. ಇದೀಗ ಈ ಪಟ್ಟಿಗೆ ರಿಲಯನ್ಸ್ ಲೈಫ್ ಸ್ಮಾರ್ಟ್ ಫೋನ್ ಹೊಸ ಸೇರ್ಪಡೆಯಾಗಿದೆ.

ವ್ಯಾಸ ರಚಿತ ಮಹಾಭಾರತ

ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ತನ್ವೀರ್ ಸಾಧಿಕ್ ಭಾನುವಾರ ತಮ್ಮ ಮೊಬೈಲ್ ಚಾರ್ಜ್ ಗೆ ಹಾಕಿದ್ದಾಗ, ಒಮ್ಮೆಲೇ ಸ್ಪೋಟಗೊಂಡು ಬೆಂಕಿ ವ್ಯಾಪಿಸಿತು ಎಂದು ಟ್ವಿಟರ್ ಮೂಲಕ ಹೇಳಿದ್ದಾರೆ. ರಿಲಯನ್ಸ್ ಜಿಯೋ ಗ್ರಾಹಕರು ಎಚ್ಚರದಿಂದ ಇರಬೇಕು, ತನ್ನ ಕುಟುಂಬ ಅಪಾಯದಿಂದ ಪಾರಾಯಿತು ಎಂದು ಹೇಳಿದ್ದಾರೆ.

ಈ ಕುರಿತು ರಿಲಯನ್ಸ್ ಲೈಫ್ ವಕ್ತಾರರು ಪ್ರತಿಕ್ರಿಯಿಸಿದ್ದು, ಲೈಫ್ ವಿಶ್ವದಲ್ಲಿಯೇ ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿಯಾಗಿದೆ. ಅಂತರಾಷ್ಟ್ರೀಯ ಗುಣಮಟ್ಟದ ಮೊಬೈಲ್ ತಯಾರಿಸುತ್ತದೆ ಎಂದು ಹೇಳಿದರು. ಸಾಮಾಜಿಕ ತಾಣದಲ್ಲಿ ಪ್ರಕಟವಾಗಿರುವ ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Related Post

error: Content is protected !!