ನಾವು ಮೊದಲು ಮುಸ್ಲಿಮರು, ನಂತರವೇ ಭಾರತೀಯರು: ಮಾವಿಯಾ ಅಲಿ |News Mirchi

ನಾವು ಮೊದಲು ಮುಸ್ಲಿಮರು, ನಂತರವೇ ಭಾರತೀಯರು: ಮಾವಿಯಾ ಅಲಿ

ಆಗಸ್ಟ್ 15 ರಂದು ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಇಸ್ಲಾಂ ವಿರೋಧಿ ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ ಮಾವಿಯಾ ಅಲಿ, ನಾವು ಯಾವುದೇ ದ್ವಜಾರೋಹಣ ನಡೆಸುವುದಿಲ್ಲ, ರಾಷ್ಟ್ರಗೀತೆ ಹಾಡುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ಸೂಚನೆಯನ್ನು ನಾವು ಪಾಲಿಸಲು ಸಿದ್ಧರಿಲ್ಲ. ನಾವು ಮೊದಲು ಮುಸ್ಲಿಮರು ನಂತರವೇ ಭಾರತೀಯರು ಎಂಬುದನ್ನು ಮತ್ತೆ ಮತ್ತೆ ಹೇಳುತ್ತೇನೆ ಎಂದು ಅಲಿ ಹೇಳಿದ್ದಾರೆ. ಇಸ್ಲಾಂ ನಡುವೆ ಏನಾದರೂ ಮಧ್ಯಪ್ರವೇಶಿಸಿದರೆ ನಾವು ಸಂವಿಧಾನಕ್ಕೆ ಬದ್ಧರಾಗಿರುವುದಿಲ್ಲ, ಇಸ್ಲಾಂನೆಡೆ ನಮ್ಮ ಬದ್ದತೆ ಎಂದು ಮಾವಿಯಾ ಅಲಿ ಹೇಳಿದ್ದಾರೆ.

ಉತ್ತರ ಪ್ರದೇಶದ ಎಲ್ಲಾ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕು. ತ್ರಿವರ್ಣ ದ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು ಎಂದು ಆದೇಶಿಸಿರುವ ಸರ್ಕಾರ. ಅದರ ವೀಡಿಯೋ ಮಾಡುವಂತೆ ಸೂಚಿಸಿತ್ತು. ಅಷ್ಟೇ ಅಲ್ಲದೆ ಸರ್ಕಾರದ ನಿರ್ದೇಶನವನ್ನು ಪಾಲಿಸದ ಮದರಸಾಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಅಲಿ ಈ ಹೇಳಿಕೆ ಹೊರಬಿದ್ದಿದೆ.

ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸುವುದರಿಂದ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಬಗ್ಗೆ ಹೆಚ್ಚು ತಿಳಿದುಕೊಂಡಂತಾಗುತ್ತದೆ. ದೇಶಪ್ರೇಮವನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂಬುದು ಸರ್ಕಾರದ ಉದ್ದೇಶ. ಆದರೆ ಸ್ವಾತಂತ್ರ್ಯ ದಿನಾಚರಣೆಯೇ ಇಸ್ಲಾಂ ವಿರೋಧಿ ಎಂದು ಕೆಲವರು ಕ್ಯಾತೆ ತೆಗೆದಿದ್ದಾರೆ.

Loading...
loading...
error: Content is protected !!