ಹಲ್ಲಿನ ಹಳದಿ ಕಲೆಯನ್ನು ಹೋಗಲಾಡಿಸಲು 5 ಮನೆಮದ್ದು – News Mirchi
We are updating the website...

ಹಲ್ಲಿನ ಹಳದಿ ಕಲೆಯನ್ನು ಹೋಗಲಾಡಿಸಲು 5 ಮನೆಮದ್ದು

ಸರಿಯಾದ ಹಲ್ಲುಜ್ಜದ ಕಾರಣ ಹಲ್ಲುಗಳ ಮೇಲೆ ಉಂಟಾಗುವ ಕಲೆ, ಸ್ವಲ್ಪ ದಿನ ಕಳೆದಂತೆ ಗಟ್ಟಿಯಾಗಿ ಟಾರ್ಟರ್(ಹಲ್ಲಿನ ಮೇಲಿನ ಹಳದಿ ಕಲೆ) ಆಗಿ ಬದಲಾಗುತ್ತದೆ. ಇದು ನೋಡಲು ಅಸಹ್ಯವೆನಿಸುತ್ತದೆಯಲ್ಲದೆ, ಅದನ್ನು ಹೋಗಲಾಡಿಸಲೂ ಕಷ್ಟ. ಆದರೆ ಕೆಲ ನೈಸರ್ಕಿಗ ಪ್ರಯತ್ನಗಳಿಂದ ನಿಮ್ಮ ಹಲ್ಲುಗಳನ್ನು ಟಾರ್ಟರ್ ರಹಿತ ಹಲ್ಲುಗಳನ್ನಾಗಿ ಮಾಡಲು ಸಾಧ್ಯ.

1. ಅಡುಗೆ ಸೋಡಾ

1 ಟೇಬಲ್ ಸ್ಪೂನ್ ಅಡುಗೆ ಸೋಡಾ ಜೊತೆ 1 ಟೇಬಲ್ ಸ್ಪೂನ್ ಉಪ್ಪು ತೆಗೆದುಕೊಳ್ಳಿರಿ. ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ನೀರಿನಲ್ಲಿ ತೊಳೆದು ಅಡುಗೆ ಸೋಡಾ ಮತ್ತು ಉಪ್ಪಿನ ಮಿಶ್ರಣದಲ್ಲಿ ಅದ್ದಿ. ಮಿಶ್ರಣದಲ್ಲಿ ಅದ್ದಿದ ಬ್ರಷ್ ನಿಂದ ಹಲ್ಲಿನ ಮೇಲೆ ಪ್ರಮುಖವಾಗಿ ಎಲ್ಲೆಲ್ಲಿ ಟಾರ್ಟರ್ ಇದೆಯೋ ಅಲ್ಲಿ ಉಜ್ಜಿ. ಎರಡು ಮೂರು ದಿನಕ್ಕೊಮ್ಮೆ ಹೀಗೆ ಮಾಡಿ. ನಿಮ್ಮ ಹಲ್ಲು ಕಲೆ ರಹಿತವಾಗಿ ಕಂಡ ನಂತರ, ವಾರಕ್ಕೊಮ್ಮೆ ಹೀಗೆ ಮಾಡಿ. ಗಮನವಿರಲಿ, ಅಡುಗೆ ಸೋಡಾವನ್ನು ಬಳಸಿ ಪ್ರತಿದಿನ ಹಲ್ಲುಜ್ಜಬೇಡಿ, ಹಾಗೇನಾದರೂ ಮಾಡಿದಲ್ಲಿ ನಿಮ್ಮ ಒಸಡುಗಳು ದುರ್ಬಲವಾಗುವ ಸಾಧ್ಯತೆ ಹೆಚ್ಚು.

2. ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆ ಕೇವಲ ಹಲ್ಲನ್ನು ಬಿಳುಪಾಗಿಸುವುದು ಮಾತ್ರವಲ್ಲ, ಹಲ್ಲು ಮತ್ತು ಒಸಡಿನ ಮೇಲೆ ಆದ ಟಾರ್ಟರ್ ಅನ್ನೂ ತೊಲಗಿಸುತ್ತದೆ. ಬಾಳೆ ಹಣ್ಣಿನ ಒಂದು ಸಿಪ್ಪೆಯಿಂದ ಎಲ್ಲಿ ಟಾರ್ಟರ್ ಇದೆಯೋ ಅಲ್ಲೆಲ್ಲಾ ಉಜ್ಜಿ, ಹೀಗೆ ಮೂರು ದಿನಗಳಿಗೊಮ್ಮೆ ಮಾಡುವುದರಿಂದ ಹಲ್ಲಿನ ಬಿಳುಪೂ ಹೆಚ್ಚುತ್ತದೆ, ಹಲ್ಲಿನ ಕಲೆಯೂ ಮಾಯವಾಗುತ್ತದೆ.

3. ಕಿತ್ತಳೆ ಹಣ್ಣಿನ ಸಿಪ್ಪೆ
ಕಿತ್ತಳೆ ಸಿಪ್ಪೆಯಿಂದ ನೇರವಾಗಿ ಹಲ್ಲಿನ ಮೇಲೆ ಟಾರ್ಟರ್ ಇರುವ ಕಡೆ ಉಜ್ಜಿ. ಪ್ರತಿದಿನ ಹಲ್ಲಿನ ಮೇಲಿನ ಕಲೆ ಹೋಗುವವರೆಗೆ ಹೀಗೆ ಮಾಡಿ. ನಂತರ ವಾರಕ್ಕೊಮ್ಮೆ ಹೀಗೆ ಮಾಡಿದರೆ ಸಾಕು.

4. ಲವಂಗ
ಐದಾರು ಲವಂಗಗಳನ್ನು ದಿನನಿತ್ಯ ಮೂರು ಬಾರಿ ಬಾಯಿಯಲ್ಲಿ ಅಗಿಯಿರಿ. ಗಮನವಿರಲಿ, ಬೇಗನೇ ಅಗಿದು ಎಲ್ಲವನ್ನೂ ನುಂಗುವುದು ಮಾಡಬೇಡಿ. ನಿಧಾನವಾಗಿ ಅಗಿಯಿರಿ, ಮತ್ತದು ನಿಮ್ಮ ಬಾಯಲ್ಲಿ ಸ್ವಲ್ಪ ಸಮಯವಿರುವಂತೆ ನೋಡಿಕೊಳ್ಳಿ. ನಿಮ್ಮ ನಾಲಿಗೆಯಿಂದ ಬಾಯಲ್ಲಿ ಅಗೆದ ಲವಂಗವನ್ನು ಕಲೆ ಇರುವ ಹಲ್ಲಿನ ಮೇಲೆ ಆಡಿಸಿ. ಟಾರ್ಟರ್ ಮಾಯವಾದ ನಂತರ ಪ್ರತಿನಿತ್ಯ ಒಮ್ಮೆ ಹೀಗೆ ಮಾಡುವುದರಿಂದ ಆರೋಗ್ಯಕರ ಹಲ್ಲು ಮತ್ತು ಒಸಡುಗಳು ನಿಮ್ಮದಾಗುತ್ತವೆ. ಲವಂಗವು ಬಾಯಿ ದುರ್ಗಂಧ ನಿವಾರನೆಗೂ ಸಹಕಾರಿ.

ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ತಿಳಿಯಿರಿ

5. ಅಂಜೂರ
ಪ್ರತಿ ದಿನ ಅಂಜೂರದ ಹಣ್ಣುಗಳನ್ನು ತಿನ್ನಿ. ತಿನ್ನಲು ರುಚಿಯಾಗಿರುವುದಲ್ಲದೆ ಈ ಹಣ್ಣುಗಳನ್ನು ನಿಧಾನವಾಗಿ ಅಗಿಯುವುದರಿಂದ ಬಾಯಿಯನ್ನು ಸ್ವಚ್ಛವಾಗಿಡಬಹುದು.

Contact for any Electrical Works across Bengaluru

Loading...
error: Content is protected !!