ರಿಸರ್ವ್ ಬ್ಯಾಂಕ್ ಬಂಪರ್ ಕೊಡುಗೆ

ಬ್ಯಾಂಕುಗಳಿಂದ ಸಾಲ ಪಡೆದವರು, ಮರುಪಾವತಿಗಾಗಿ ಕೈಯಲ್ಲಿ ಹಣವಿಲ್ಲದ ಕಾರಣ ಮರುಪಾವತಿ ಪರದಾಡುತ್ತಿದ್ದಾರೆ, ಅಂತಹವರಿಗೆ ರಿಸರ್ವ್ವ್ ಬ್ಯಾಂಕ್ ಬಂಪರ್ ಕೊಡುಗೆ ಪ್ರಕಟಿಸಿದೆ. ಒಂದು ಕೋಟಿ ರೂಪಾಯಿಯವರೆಗೂ ತೆಗೆದುಕೊಂಡಿರುವ ಗೃಹ ಸಾಲ, ಕಾರು ಸಾಲ, ಬೆಳೆ ಸಾಲ ಮುಂತಾದ ಸಾಲಗಳನ್ನು ಮರುಪಾವತಿ ಮಾಡಲು ಇನ್ನೂ 60 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.

ನವೆಂಬರ್ 1 ರಿಂದ ಡಿಸೆಂಬರ್ 31 ರೊಳಗೆ ಪಾವತಿಸಬೇಕಿರುವ ಎಲ್ಲಾ ರೀತಿಯ ಸಾಲಗಳಿಗೆ ಇದು ಅನ್ವಯವಾಗುತ್ತದೆ ಎಂದು ಪ್ರಕಟಿಸಿದೆ. ಒಂದು ಕೋಟಿ ಒಳಗೆ ವರ್ಕಿಂಗ್ ಕ್ಯಾಪಿಟಲ್ ಆಗಿ ತೆಗೆದುಕೊಂಡ ಸಂಸ್ಥೆಗಳಿಗೂ ಕೂಡಾ ಇದು ಅನ್ವಯವಾಗುತ್ತದೆ. ವೈಯುಕ್ತಿಕವಾಗಲೀ, ವ್ಯಾಪಾರಕ್ಕಾಗಿ ಆಗಲೀ ತೆಗೆದುಕೊಂಡಿರುವ ಸಾಲ ಒಂದು ಕೋಟಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಯಾವುದೇ ಬ್ಯಾಂಕ್ ಅಥವಾ ಎನ್‌ಬಿ‌ಎಫ್‌ಸಿ ಯಲ್ಲಿ ತೆಗೆದುಕೊಂಡ ಸಾಲಗಳಿಗೂ ಇದು ಅನ್ವಯವಾಗುತ್ತದೆ.

ನೋಟು ರದ್ದುಗೊಂಡ ಕಾರಣ ಬ್ಯಾಂಕುಗಳಲ್ಲಿ ರಶ್ ಹೆಚ್ಚಾಗಿದ್ದು, ಚೆಕ್ ಕ್ಲಿಯರೆನ್ಸ್ ನಂತಹ ಎಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಇದರ ಜೊತೆಗೆ ವಾರಕ್ಕೆ ರೂ. 24 ಸಾವಿರ ರೂ ಮಾತ್ರ ವಿತ್ ಡ್ರಾ ಮಾಡಲು ಅವಕಾಶ ಇರುವುದರಿಂದ ಸಾಲ ಮರುಪಾವತಿಗಳಿಗೆ ಜನರಿಗೆ ತೊಂದರೆಯಾಗಿದೆ.

ಇದೀಗ ಹೆಚ್ಚುವರಿ ಎರಡು ತಿಂಗಳು ಕಾಲಾವಕಾಶ ನೀಡಿರುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಹಲವರು ಮೊದಲ ವಾರದಲ್ಲೇ ಪಾವತಿ ಮಾಡಬೇಕಿರುತ್ತದೆ. ಆದರೆ ಈಗ ಮರುಪಾವತಿ ಮಾಡಲಾಗದವರ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪ್ರಭಾವ ಬೀರದು ಎಂದು ಡಿಹೆಚ್‌ಎಫ್ಎಲ್ ಸಿಇಒ ಹರ್ಶಿಲ್ ಮೆಹತಾ ಹೇಳಿದ್ದಾರೆ.

Related News

loading...
error: Content is protected !!