demonetised-notes

ಇನ್ನೂ ಮುಗಿಯದ ಹಳೆಯ ನೋಟು ಎಣಿಕೆ

500 ಮತ್ತು 1000 ಮುಖಬೆಲೆಯ ನೋಟುಗಳು ರದ್ದುಗೊಂಡ 15 ತಿಂಗಳುಗಳಾದರೂ, ಬ್ಯಾಂಕುಗಳಿಗೆ ವಾಪಸ್ ಬಂದ ಹಳೆಯ ನೋಟುಗಳ ಎಣಿಕೆ ಕಾರ್ಯ ಇನ್ನೂ ಮುಂದುವರೆದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಪ್ರಾಮಾಣಿಕ ಮತ್ತು ಲೆಕ್ಕದ ನಿಖರತೆಗಾಗಿ ಎಣಿಕೆ ಕಾರ್ಯ ಇನ್ನೂ ಮುಂದುವರೆದಿದ್ದು, ಈ ಕೆಲಸಕ್ಕಾಗಿ 59 ಅತ್ಯಾಧುನಿಕ ವೆರಿಫಿಕೇಷನ್ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈಗ ವೇಗವಾಗಿ ಈ ಕಾರ್ಯ ಸಾಗಿದ್ದರೂ, ಈ ಪ್ರಕ್ರಿಯೆ ಮುಗಿಯಲು ತುಂಬಾ ಸಮಯ ಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಅಗತ್ಯ ಬಿದ್ದರೆ ದೇಶಕ್ಕಾಗಿ ಗಡಿಯಲ್ಲಿ ನಿಂತು ಹೋರಾಡಲು ಆರ್.ಎಸ್.ಎಸ್ ಸಿದ್ಧ

ಎಷ್ಟು ರದ್ದಾದ ನೋಟುಗಳು ಬ್ಯಾಂಕುಗಳಿಗೆ ಹಿಂತಿರುಗಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಆರ್.ಬಿ.ಐ, ಜೂನ್ 30, 2017 ರವರೆಗೆ 15.28 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ವಾಪಸಾಗಿವೆ. ಇವು ಕೇವಲ ಅಂದಾಜು ಮೊತ್ತವಾಗಿದ್ದು, ಅಂಕಿ ಸಂಖ್ಯೆಗಳು ಬದಲಾಗಲೂಬಹದು.

ನಂತರ ಬ್ಯಾಂಕುಗಳಿಗೆ ಹಿಂತಿರುಗಿಸಿದ ನೋಟುಗಳ ಎಣಿಕೆ ಕಾರ್ಯ ಇನ್ನೂ ಮುಗಿದಿಲ್ಲ. ಒಮ್ಮೆ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಗಿದ ನಂತರ ಈ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಳ್ಳಬಹುದು ಎಂದು ಆರ್.ಬಿ.ಐ ಹೇಳಿದೆ.

ನೆಲಕ್ಕುರುಳಿದ 71 ಪ್ರಯಾಣಿಕರಿದ್ದ ರಷ್ಯಾ ವಿಮಾನ

ಕಪ್ಪು ಹಣ, ನಕಲಿ ನೋಟುಗಳನ್ನು ನಿಯಂತ್ರಿಸುವ ಉದ್ದೇಶದಿಂದ ನವೆಂಬರ್ 8, 2016 ರಂದು ಕೇಂದ್ರ ಸರ್ಕಾರ ಹಳೆಯ ರೂ.500 ಮತ್ತು ರೂ.1,000 ಮೌಲ್ಯದ ನೋಟುಗಳನ್ನು ರದ್ದುಗೊಳಿಸಿತ್ತು.

Get Latest updates on WhatsApp. Send ‘Subscribe’ to 8550851559