ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆ, ಅರೆ ಸೇನಾ ಪಡೆ ಕಳುಹಿಸಿದ ಕೇಂದ್ರ |News Mirchi

ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆ, ಅರೆ ಸೇನಾ ಪಡೆ ಕಳುಹಿಸಿದ ಕೇಂದ್ರ

ಪಶ್ಚಿಮ ಬಂಗಾಳದಲ್ಲಿ ಒಂದು ಧರ್ಮಕ್ಕೆ ಸೇರಿದ್ದ ಪುಣ್ಯ ಕ್ಷೇತ್ರವನ್ನು ಅವಹೇಳನ ಮಾಡಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು ಎಂಬ ಕಾರಣಕ್ಕೆ ಸೋಮವಾರ ಗಲಭೆ ಶುರುವಾಗಿದೆ. ಶಾಂತಿ ಭದ್ರತೆಗಳಿಗಾಗಿ ರಾಜ್ಯ ಪೊಲೀಸರ ಜೊತೆ 400 ಜನ ಬಿಎಸ್ಎಫ್ ಯೋಧರನ್ನು ಸರ್ಕಾರ ನಿಯೋಜಿಸಿದೆ. ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬದೂರಿಯಾ ಪ್ರದೇಶದಲ್ಲಿ ಈ ಘರ್ಷಣೆಗಳು ನಡೆದಿವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಹಿಂಸೆಗಿಳಿದ ಗುಂಪು ಹಲವು ಕಡೆ ರಸ್ತೆಗಳನ್ನು ತಡೆದು ಮತ್ತೊಂದು ಸಮುದಾಯದವರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಳಿಗೆ, ಕಛೇರಿಗಳು ಧ್ವಂಸವಾಗಿದೆ.

ಸುಮಾರು 2000 ಮುಸ್ಲಿಮರು ಉತ್ತರ 24 ಪರಗಣ ಜಿಲ್ಲೆಯ ಹಿಂದು ಕುಟುಂಬಗಳ ಮತ್ತವರ ಕಛೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಹಲವು ಕಡೆ ಬಾಂಬ್ ಎಸೆಯಲಾಗಿದೆ, ಕೆಲವು ಕಡೆ ಹಿಂದೂ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿದ ಸುದ್ದಿಗಳು ಬಂದಿವೆ, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಗಲಭೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಫೇಸ್ಬುಕ್ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಬಂಧಿಸಿದ್ದೇವೆ, ಇದರಲ್ಲಿ ನಮ್ಮ ಸರ್ಕಾರ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಕೋಮುಗಲಭೆ ಸಂಬಂಧಿಸಿದಂತೆ  ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ತಮಗೆ ಅವಮಾನ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅವರು ನನ್ನನ್ನು ಫೋನ್ ಮಾಡಿ ಬೆದರಿಸಿದರು. ಬಿಜೆಪಿ ತಾಲ್ಲೂಕು ಮಟ್ಟದ ನಾಯಕನಂತೆ ಅವರು ಮಾತನಾಡಿದ ಮಾತುಗಳಿಂದ ನನಗೆ ಅವಮಾನವಾಗಿದೆ ಎಂದು ಹೇಳಿದ್ದಾರೆ. ಅವರು ಗವರ್ನರ್ ಹುದ್ದೆಯಲ್ಲಿದ್ದಾರೆ ಎಂದು ನೆನಪಿಟ್ಟುಕೊಳ್ಳಬೇಕು. ಯಾರ ದಯೆಯಿಂದಲೂ ನಾನು ಮುಖ್ಯಮಂತ್ರಿಯಾಗಿಲ್ಲ. ಅವರು ನನ್ನೊಂದಿಗೆ ಮಾತನಾಡುವ ಶೈಲಿ ನೋಡಿ ಒಮ್ಮೆ ಸಿಎಂ ಹುದ್ದೆಯಿಂದ ಕೆಳಗಿಳಿದು ಬಿಡೋಣ ಅನ್ನಿಸಿತ್ತು ಎಂದು ಹೇಳಿದ್ದಾರೆ. ಕೇಂದ್ರದಲ್ಲಿರುವ ಆಡಳಿತ ಪಕ್ಷಕ್ಕೆ ಒಂದು ಅಜೆಂಡಾ ಇದೆ. ಅವರು ಮನುಷ್ಯರನ್ನು ಕೊಲ್ಲಲು ಗೋರಕ್ಷಾ ತಂಡಗಳನ್ನು ರಚಿಸಿದ್ದಾರೆ. ಗಲಭೆ ಸೃಷ್ಟಿಸಲೆಂದೇ ತಂಡ ಸೃಷ್ಟಿಯಾಗಿದೆ, ಹಿಂದೂ ಸಂಹಿತಿ ಹೆಸರಿನಿಂದ ಗಲಭೆಗಳು ನಡೆಯುತ್ತಿವೆ ಎಂದು ಮಮತಾ ಆರೋಪಿಸಿದ್ದಾರೆ.

Loading...
loading...
error: Content is protected !!