ರಣಜಿ ಕ್ರಿಕೆಟ್‌ನಲ್ಲಿ ರಿಷಬ್ ಪಂತ್ ಹೊಸ ದಾಖಲೆ

ತಿರುವನಂತಪುರಂ: ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ದೆಹಲಿಯ ರಿಷಬಗ ಪಂತ್, ಅತಿ ವೇಗದ ಶತಕ ಸಿಡಿಸಿ ರಣಜಿ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ತಿರುವನಂತಪುರಂನ ಸೆಂಟ್ ಕ್ಸೆವಿಯರ್ಸ್ ಮೈದಾನದಲ್ಲಿ ಜಾರ್ಖಂಡ್ ವಿರುದ್ಧದ ನಡೆದ ಪಂದ್ಯದಲ್ಲಿ ಕೆವಲ 48 ಎಸೆತಗಳಲ್ಲಿ ಶತಕ ಭಾರಿಸಿ ನೂತನ ದಾಖಲೆ ಮಾಡಿದ್ದಾರೆ.

ಈ ಶತಕದ ಮೂಲ 28 ವರ್ಷಗಳ ಹಿಂದೆ 56 ಎಸೆತಗಳಲ್ಲಿ ಶತಕ ಭಾರಿಸಿದ್ದ ಆರ್.ಕೆ ಬೋಹ್ರಾ ಮತ್ತು ವಿ.ಜಿ ಚಂದ್ರಶೇಖರ್ ರವರ ದಾಖಲೆಯನ್ನು ಮುರಿದಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ವಿರುದ್ಧ 308 ರನ್ ಭಾರಿಸಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ಭಾರಿಸಿದ ಎರಡನೇ ವಿಕೆಟ್ ಎಂಬ ಗೌರವಕ್ಕೂ ಪಾತ್ರರಾಗಿದ್ದರು.